ಪಂಡಿಂಜೆ ಅಂಗನವಾಡಿ ಕೇಂದ್ರದಲ್ಲಿ ಪೌಷ್ಟಿಕ ಆಹಾರ ಸಪ್ತಾಹ

0

ಕುಕ್ಕೇಡಿ: ಪಂಡಿಂಜೆ ಅಂಗನವಾಡಿ ಕೇಂದ್ರದಲ್ಲಿ ಬಾಲವಿಕಾಸ ಸಮಿತಿ ಅಧ್ಯಕ್ಷ ರಂಜಿತಾ ಇವರ ಅಧ್ಯಕ್ಷತೆಯಲ್ಲಿ ಪೌಷ್ಠಿಕ ಆಹಾರ ಸಪ್ತಾಹ ಕಾರ್ಯಕ್ರಮ ಸೆ.21ರಂದು ನಡೆಯಿತು.

ಈ ಕಾರ್ಯಕ್ರಮದಲ್ಲಿ ಅಪೌಷ್ಠಿಕತೆ ಬಗ್ಗೆ , ಪೌಷ್ಠಿಕಾಂಶಯುಕ್ತ ಆಹಾರದ ಬಗ್ಗೆ ಅಂಗನವಾಡಿ ಮೇಲ್ವಿಚಾರಕಿ ಗುಲಾಬಿ ಎ. ಮಾಹಿತಿ ನೀಡಿದರು. ಮಕ್ಕಳಿಗೆ ಮೊಬೈಲ್ ಕೊಡುವುದರಿಂದ ಆಗುವ ದುಷ್ಪರಿಣಾಮಗಳ ಸ.ಹಿ.ಪ್ರಾ. ಶಾಲೆ ಪಂಡಿಜೆಯ ಮುಖ್ಯ ಶಿಕ್ಷಕಿ ಫ್ಲೇವಿಯ ಡಿಸೋಜ ವಿವರವಾದ ಮಾಹಿತಿ ನೀಡಿದರು.

ಸಂಜೀವಿನಿ ಒಕ್ಕೂಟದ MBK- ಚೈತ್ರಾ PMJJBY ಮತ್ತು PMSBY ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ಸ್ತ್ರೀ ಶಕ್ತಿ ಸಂಗದ ಸದಸ್ಯರು ಪೋಷಕರು ಹಾಗೂ ಪುಟಾಣಿ ಮಕ್ಕಳು ಭಾಗಹಿಸಿದ್ದರು.

ಅಂಗನವಾಡಿ ಕಾರ್ಯಕರ್ತೆ ಕುಮಾರಿ ಪ್ರೇಮ ಕಾರ್ಯಕ್ರಮ ನಿರೂಪಿಸಿ, ಗೀತಾ ಸ್ವಾಗತಿಸಿ, ಹರಿಣಾಕ್ಷಿ ಧನ್ಯವಾದಗೈದರು.

p>

LEAVE A REPLY

Please enter your comment!
Please enter your name here