ಉಜಿರೆ: ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಶಿಕ್ಷಕರಿಗೆ ‘ಫೋನೆಟಿಕ್ಸ್ ಇನ್ ಆಕ್ಷನ್:ಎಂಗೇಜಿಂಗ್ ಯಂಗ್ ಮೈಂಡ್ಸ್’ ಕಾರ್ಯಗಾರ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಬೆಂಗಳೂರಿನ ಆಕ್ಸ್ಫರ್ಡ್ ಯೂನಿವರ್ಸಿಟಿ ಪ್ರೆಸ್ ಇಂಡಿಯಾದ ಅಕಾಡೆಮಿಕ್ ಎಕ್ಸಲೆನ್ಸ್ ಮ್ಯಾನೇಜರ್ ಆಗಿರುವ ವಿದ್ಯಾ ನಾರಾಯಣನ್ ಕಲಿಕೆಯಲ್ಲಿ ಮತ್ತಷ್ಟು ಚಟುವಟಿಕೆಗಳನ್ನು ಅಳವಡಿಸುವ ಕುರಿತಾಗಿ ಪ್ರಾಯೋಗಿಕ ಚಟುವಟಿಕೆಗಳೊಂದಿಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಮಂಗಳೂರು ಆಕ್ಸ್ಫರ್ಡ್ ಜೋನಲ್ ಮ್ಯಾನೇಜರ್ ಸುಜಿತ್ ಉಪಸ್ಥಿತರಿದ್ದರು.
ಕಾರ್ಯಗಾರದಲ್ಲಿ ಉಜಿರೆ, ಧರ್ಮಸ್ಥಳ, ಬೆಳ್ತಂಗಡಿ ಹಾಗೂ ಮಂಗಳೂರು ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಶಾಲೆಯ ಕಿಂಡರ್ಗಾರ್ಟನ್ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕಿಯರು ಭಾಗವಹಿಸಿದರು.
ಕಾರ್ಯಗಾರದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯ ಮನ್ಮೋಹನ್ ನಾಯ್ಕ್ ಕೆ.ಜಿ ವಹಿಸಿದ್ದರು.
ಶಿಕ್ಷಕಿ ಮಧುರ ನಿರೂಪಿಸಿದ ಕಾರ್ಯಕ್ರಮದಲ್ಲಿ ಶಿಕ್ಷಕಿಯರಾದ ಸುಮಾ ಶ್ರೀನಾಥ್ ಹಾಗೂ ಸ್ಮೃತಿ ಜೈನ್ ಪ್ರಾರ್ಥನೆ ಮಾಡಿದರು.
p>