17ರ ವಯೋಮಾನದ ಬಾಲಕಿಯರ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟ: ಮುಂಡಾಜೆ ವಿವೇಕಾನಂದ ಪ್ರೌಢ ಶಾಲೆಯ ಬಾಲಕಿಯರು ವಿಭಾಗ ಮಟ್ಟಕ್ಕೆ ಆಯ್ಕೆ

0

ಮುಂಡಾಜೆ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಉಪನಿರ್ದೇಶಕರ ಕಛೇರಿ ಮಂಗಳೂರು ಇದರ ಆಶ್ರಯದಲ್ಲಿ ಮೂಡಬಿದ್ರೆ ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ 17ರ ವಯೋಮಾನದ ಬಾಲಕಿಯರ ವಿಭಾಗದ ವಾಲಿಬಾಲ್ ಪಂದ್ಯಾಟದಲ್ಲಿ ಬೆಳ್ತಂಗಡಿ ತಾಲೂಕನ್ನು ಪ್ರತಿನಿಧಿಸಿದ ವಿವೇಕಾನಂದ ಶಿಕ್ಷಣ ಸಂಸ್ಥೆ ಮುಂಡಾಜೆಯ ಪ್ರೌಢಶಾಲಾ ಬಾಲಕಿಯರ ತಂಡ ಸತತ 14 ವರುಷಗಳಿಂದ ಪ್ರಥಮ ಸ್ಥಾನ ಪಡೆದಿದ್ದಾರೆ.

ಅಕ್ಟೋಬರ್ 8,9ರಂದು ಹಾಸನದಲ್ಲಿ ನಡೆಯುವ ಮೈಸೂರು ವಿಭಾಗ ಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತದೆ.

ಬೆಸ್ಟ್ ಪಾಸರ್ ಆಗಿ ಕು.ಸಿಂಚನಾ ಬಂದಾರು, ಬೆಸ್ಟ್ ಹೊಡೆತಗಾರ್ತಿಯಾಗಿ ಕು.ಯಕ್ಷಿತಾ ಬಂದಾರು ಇವರು ವೈಯಕ್ತಿಕ ಪ್ರಶಸ್ತಿ ಪಡೆದಿರುತ್ತಾರೆ.

LEAVE A REPLY

Please enter your comment!
Please enter your name here