ಬೆಳ್ತಂಗಡಿ: ಬೆಳ್ತಂಗಡಿ ಪ್ರೇರಣಾ ಸೌಹಾರ್ದ ಸಹಕಾರಿಯ ವಾರ್ಷಿಕ ಮಹಾಸಭೆಯು ಸೆ.16ರಂದು ಬೆಳ್ತಂಗಡಿ ಸಂತೆಕಟ್ಟೆ ಬಳಿ ಇರುವ ರಾಜೀವ್ ಗಾಂಧಿ ವಾಣಿಜ್ಯ ಸಂಕೀರ್ಣ ಸಂಘದ ಕಚೇರಿಯಲ್ಲಿ ಸಂಘದ ಅಧ್ಯಕ್ಷ ಲ್ಯಾನ್ಸಿ ಎ.ಪಿರೇರಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಂಘದಲ್ಲಿ ಒಟ್ಟು 679 ಸದಸ್ಯರಿದ್ದು, 17,43,500 ಬಂಡವಾಳ ಹೊಂದಿದೆ. ರೂ.5.97ಕೋಟಿ ಠೇವಣಿಯೊಂದಿಗೆ ರೂ.25 ಕೋಟಿ ವ್ಯವಹಾರ ನಡೆಸಿದೆ. ಸದಸ್ಯರಿಗೆ ಶೇ.13 ಡಿವಿಡೆಂಡ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಲ್ಯಾನ್ಸಿ ಎ.ಪಿರೇರಾ ಘೋಷಿಸಿದರು.
ಸಂಘದ ಉಪಾಧ್ಯಕ್ಷ ವಿಲ್ಸನ್ ಜೋರ್ಜ್ ಗೊನ್ಸಾಲ್ವಿಸ್, ನಿರ್ದೇಶಕರುಗಳಾದ ವಿನ್ಸೆಂಟ್ ಟಿ.ಡಿಸೋಜ, ಜಾನ್ ಅರ್ವಿನ್ ಡಿ’ಸೋಜಾ, ಎಲೋಸಿಯಸ್ ಎಸ್.ಲೋಬೊ, ಜಾನ್ ಆಲ್ವಿನ್ ಪಿಂಟೊ, ಕು. ತಿಯೋಫಿಲಾ ಡಿಸೋಜ, ಸೆಲಿನ್ ನೊರೋನಾ ಉಪಸ್ಥಿತರಿದ್ದರು.
ಮುಖ್ಯಕಾರ್ಯನಿರ್ವಹಣಾಧಿಕಾರಿ ಐರಿನ್ ಡಿಸೋಜ ವಾರ್ಷಿಕ ವರದಿ ಮಂಡಿಸಿದರು.ಉಪಾಧ್ಯಕ್ಷ ವಿಲ್ಸನ್ ಗೊನ್ಸಾಲ್ವಿಸ್ ಸ್ವಾಗತಿಸಿದರು. ನಿರ್ದೇಶಕ ಜಾನ್ ಅರ್ವಿನ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.
ಸಭೆಯಲ್ಲಿ ಲಕ್ಕಿ ಕೂಪನ್ ಡ್ರಾ ನಡೆಸಲಾಯಿತು.