ಗುರುವಾಯನಕೆರೆಯಲ್ಲಿ ನಿಯಮ ಉಲ್ಲಂಸಿ ಕಾಲೇಜು ಕಟ್ಟಡ ನಿರ್ಮಾಣ ಆರೋಪ:ಪಿ.ಐ.ಎಲ್. ವಿಚಾರಣೆಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

0

ಬೆಳ್ತಂಗಡಿ: ಕುವೆಟ್ಟು ಗ್ರಾಮದ ಗುರುವಾಯನಕೆರೆಯಲ್ಲಿ ಇನ್ಫಿನಿಟಿ ಲರ್ನಿಂಗ್ ಫೌಂಡೇಶನ್ ಅಧ್ಯಕ್ಷ ಬಿ.ಸುಮಂತ್ ಕುಮಾರ್ ಜೈನ್ ಅವರು ೨೦೨೦ರಲ್ಲಿ ನಾಲ್ಕು ಮಹಡಿಯ ಕಾಲೇಜು ಕಟ್ಟಡವನ್ನು ಅಕ್ರಮವಾಗಿ ನಿರ್ಮಿಸಿದ್ದಾರೆ ಎಂದು ಆಕ್ಷೇಪಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೆ.೩ರಂದು ನೋಟಿಸ್ ಜಾರಿಗೊಳಿಸಿದೆ.
ಘಟನೆ ವಿವರ: ಕುವೆಟ್ಟು ಗ್ರಾಮದ ಗುರುವಾಯನಕೆರೆಯಲ್ಲಿ ಇನ್ಫಿನಿಟಿ ಲರ್ನಿಂಗ್ ಫೌಂಡೇಶನ್ ಅಧ್ಯಕ್ಷ ಬಿ.ಸುಮಂತ್ ಕುಮಾರ್ ಜೈನ್ ಅವರು ೨೦೨೦ರಲ್ಲಿ ನಾಲ್ಕು ಮಹಡಿಯ ಕಾಲೇಜು ಕಟ್ಟಡವನ್ನು ಅಕ್ರಮವಾಗಿ ನಿರ್ಮಿಸಿದ್ದಾರೆ ಎಂದು ಆಕ್ಷೇಪಿಸಿ ತೆಂಕಕಾರಂದೂರು ಗ್ರಾಮದ ಅಶೋಕ್ ಆಚಾರ್ಯ ಎಂಬವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ. ಅರವಿಂದ್ ನೇತೃತ್ವದ ವಿಭಾಗೀಯ ಪೀಠ ಸೆ.೩ರಂದು ವಿಚಾರಣೆ ನಡೆಸಿತು.
ಕೆರೆ ಪ್ರದೇಶದ ೩೦ ಮೀಟರ್ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಿಸುವಂತಿಲ್ಲ ಎಂಬ ನಿಯಮವಿದೆ. ಆದರೆ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಕಾಯ್ದೆಯನ್ನು ಉಲ್ಲಂಸಲಾಗಿದೆ. ಗುರುವಾಯನಕೆರೆಯ ಪ್ರದೇಶಕ್ಕೆ ಹೊಂದಿಕೊಂಡಂತೆ ಸರ್ವೇ ನಂ.೧೩/೨, ೧೩/೧೦, ೧೩/೧೬, ೧೩/೧೭ಗಳಲ್ಲಿ ನಾಲ್ಕು ಮಹಡಿಯ ಕಟ್ಟಡ ನಿರ್ಮಿಸಲಾಗಿದೆ. ಕೆರೆಗೆ ಹೊಂದಿಕೊಂಡ ಸರ್ವೇ ನಂ.೧೬೮/೨ ಮತ್ತು ೧೬೮/೩ರಲ್ಲಿ ಬಹುಮಹಡಿ ಕಟ್ಟಡ ನಿರ್ಮಿಸಲಾಗುತ್ತಿದೆ. ಆದ್ದರಿಂದ ಈ ಅಕ್ರಮ ಕಟ್ಟಡ ತೆರವುಗೊಳಿಸಬೇಕು ಹಾಗೂ ಪ್ರಗತಿಯಲ್ಲಿರುವ ಕಟ್ಟಡ ನಿರ್ಮಾಣ ಕಾರ್ಯಕ್ಕೆ ತಡೆ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠ ಪ್ರತಿವಾದಿಗಳಾಗಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ, ಪಂಚಾಯತ್‌ರಾಜ್ ಇಂಜಿನಿಯರಿಂಗ್ ಇಲಾಖೆಯ ಬೆಳ್ತಂಗಡಿ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಸಣ್ಣ ನೀರಾವರಿ ಹಾಗೂ ಇಂಜಿನಿಯರಿಂಗ್ ಇಲಾಖೆಯ ಬೆಳ್ತಂಗಡಿ ಉಪ ವಿಭಾಗದ ಕಾರ್ಯ ನಿರ್ವಾಹಕ ಇಂಜಿನಿಯರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಕುವೆಟ್ಟು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಕಟ್ಟಡದ ಮಾಲಕ ಬಿ.ಸುಮಂತ್ ಕುಮಾರ್ ಜೈನ್‌ರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಸೆ.೧೮ಕ್ಕೆ ಮುಂದೂಡಿದೆ.

ನಾವು ನಿಯಮ ಉಲ್ಲಂಸಿಲ್ಲ, ಎಲ್ಲವೂ
ಕಾನೂನುಬದ್ಧ, ೨ ಕೋಟಿ ರೂ. ನೀಡದಿದ್ದರೆ ಕೋರ್ಟಿಗೆ ಹೋಗುತ್ತೇವೆ ಎಂದು ಹೇಳಿದವರಿದ್ದಾರೆ: ಸುಮಂತ್ ಕುಮಾರ್ ಜೈನ್
ನಾವು ಕಾನೂನು ಬದ್ಧವಾಗಿಯೇ ಕಾಲೇಜು ಕಟ್ಟಡ ನಿರ್ಮಿಸಿzವೆ. ಭೂ ಪರಿವರ್ತನೆ, ಸಿಂಗಲ್ ಸೈಟ್, ೯-೧೧ ಆಗಿದೆ. ಗ್ರಾಮ ಪಂಚಾಯತ್‌ನ ಪರ್ಮಿಷನ್ ಇದೆ. ಪದವಿಪೂರ್ವ ಕಾಲೇಜಿಗೆ ಅನುಮತಿ ಸಿಕ್ಕಿದೆ. ಈ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿಯೇ ಬ್ಯಾಂಕ್‌ನವರು ೨೫ ಕೋಟಿ ರೂಪಾಯಿ ಸಾಲ ನೀಡಿದ್ದಾರೆ. ದಾಖಲೆ ಸರಿ ಇಲ್ಲದಿದ್ದರೆ ಯಾರೂ ಸಾಲ ಕೊಡುವುದಿಲ್ಲ. ಕೆರೆಗಿಂತ ೩೦ ಮೀಟರ್ ದೂರದಲ್ಲಿ ನಮ್ಮ ಕಟ್ಟಡಗಳಿವೆ. ನಾವು ಯಾವುದೇ ನಿಯಮಗಳನ್ನು ಉಲ್ಲಂಸಿಲ್ಲ. ಎಲ್ಲವೂ ಅಧಿಕೃತವಾಗಿದೆ. ಐದು ವರ್ಷಗಳಿಂದ ಉತ್ತಮ ಫಲಿತಾಂಶ ಬರುತ್ತಿದ್ದು ಸಾವಿರಾರು ಮಕ್ಕಳು ವಿದ್ಯಾಭ್ಯಾಸ ಪಡೆದಿದ್ದಾರೆ. ೪೦೦ ಜನರಿಗೆ ಕೆಲಸ ನೀಡಿzವೆ. ಮಂಗಳೂರು, ಮೂಡುಬಿದಿರೆಗಳಲ್ಲಿ ಇಂಥ ಕಾಲೇಜುಗಳಿಗೆ ಸ್ಥಳೀಯವಾಗಿ ಬೆಂಬಲ ಸಿಗುತ್ತದೆ. ಆದರೆ, ಇಲ್ಲಿ ಶಾಲೆಗೆ ಸ್ವಾರ್ಥದ ಕಾರಣಗಳಿಂದಾಗಿ ತೊಂದರೆ ನೀಡಲಾಗುತ್ತಿದೆ.
ನಾವು ಗ್ರಾ.ಪಂ.ಗೆ ೪೦ ಲಕ್ಷ ರೂ. ತೆರಿಗೆ ಪಾವತಿಸಿzವೆ. ಅನಧಿಕೃತವಾಗಿದ್ದರೆ ತೆರಿಗೆ ಪಡೆದುಕೊಂಡದ್ದು ಯಾಕೆ? ನಾವು ಭ್ರಷ್ಟಾಚಾರದ ವಿರೋಧಿಗಳು. ಅದನ್ನೇ ಮಕ್ಕಳಿಗೂ ಹೇಳಿಕೊಡುತ್ತೇವೆ. ನಮಗೆ ಇದುವರೆಗೆ ಯಾವುದೇ ನೋಟಿಸ್ ಬಂದಿಲ್ಲ. ಆದರೆ, ೨ ಕೋಟಿ ರೂ. ಹಣ ಕೊಡದಿದ್ದರೆ ಕೋರ್ಟಿಗೆ ಹೋಗುತ್ತೇವೆ ಎಂದು ಹೇಳಿದವರಿದ್ದಾರೆ. ಈ ಕುರಿತು ದಾಖಲೆಯೂ ಇದೆ. ನಾವು ಹಣ ಕೊಡದ ಕಾರಣ ಹೀಗೆ ಮಾಡುತ್ತಿದ್ದಾರೆ. ನಾನು ಒಂದು ರೂಪಾಯಿಯನ್ನೂ ಕೊಡುವುದಿಲ್ಲ. ನಾವು ಯಾವುದನ್ನೂ ಅನಧಿಕೃತವಾಗಿ ಮಾಡುತ್ತಿಲ್ಲ. ಹಾಗಾಗಿ ಅಪಪ್ರಚಾರಗಳಿಗೆ ಹೆದರುವುದೂ ಇಲ್ಲ. ನಮ್ಮ ಕಡೆಯಿಂದ ಯಾವುದೇ ತಪ್ಪುಗಳಾಗಿಲ್ಲ. ನಾವು ಕಾನೂನು ಪ್ರಕಾರವೇ ಸಂಸ್ಥೆ ನಡೆಸುತ್ತಿzವೆ.

  • ಸುಮಂತ್ ಕುಮಾರ್ ಜೈನ್
    ಇನ್ಫಿನಿಟಿ ಲರ್ನಿಂಗ್ ಫೌಂಡೇಶನ್ ಚೇರ್ಮನ್

p>

LEAVE A REPLY

Please enter your comment!
Please enter your name here