ಉಜಿರೆ: ವಿಶ್ವ ಹಿಂದೂ ಪರಿಷತ್ ಸ್ಥಾಪನಾ ದಿನ ಹಾಗೂ ಷಷ್ಠಿ ಪೂರ್ತಿ ಸಮಾರೋಪದ ಅಂಗವಾಗಿ ಶೋಭಾಯಾತ್ರೆ ಹಾಗೂ ಬೃಹತ್ ಸಮಾವೇಶ ಸೆ.1ರಂದು ನಡೆಯಿತು. ಶೋಭಾಯಾತ್ರೆಗೆ ಚಾಲನೆಯನ್ನು ಸಂಘದ ಹಿರಿಯರಾದ ಶೇಷಗಿರಿ ಶೆಣೈ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಉಜಿರೆ ಎಸ್.ಡಿ.ಎಮ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸತೀಶ್ಚಂದ್ರ , ಬೆಳ್ತಂಗಡಿ ತಾಲೂಕು ಆರ್.ಎಸ್.ಎಸ್ ಸಂಘ ಚಾಲಕರಾದ ಗಣೇಶ್ ಭಟ್, ಉದ್ಯಮಿಗಳಾದ ದಯಾಕರ್ ಉಪಸ್ಥಿತರಿದ್ದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಎಸ್.ಡಿ.ಎಮ್. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸತೀಶ್ಚಂದ್ರ ಮಾತನಾಡಿ ಈಗ ನಾವು ನಮ್ಮ ದೇಶವನ್ನು ಭಾರತ ಎಂದು ಕರೆದರೂ ಕೂಡ ಹಿಂದುಸ್ಥಾನ ಹಿಂದೂ ದೇಶ ಈ ಹಿಂದೂ ದೇಶದ ಅಖಂಡತೆಯನ್ನು ನಿರಂತರವಾಗಿ ಶಾಶ್ವತವಾಗಿ ನಾವು ಉಳಿಸಿ ಬೆಳೆಸಿ ನಾವು ಭಾರತ ಮಾತೆಯ ಮಕ್ಕಳಾಗಿ ನಿರಂತರವಾಗಿ ಈ ದೇಶ ಸೇವೆಯನ್ನು ಮಾಡುವ ಮುಖಾಂತರ ಈ ಕಾರ್ಯಕ್ರಮ ವಿಶೇಷವಾಗಿ ಮೂಡಿ ಬಂದಿದೆ.ಮನೆ ಮನಗಳಲ್ಲಿ ಮುಟ್ಟುವಂತಹ ಕಾರ್ಯಕ್ರಮವಾಗಲಿ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಶೋಭಾಯಾತ್ರೆ ವಿಶೇಷ ಆಕರ್ಷಣೆ: ಸಂದೇಶ್ ಮದ್ದಡ್ಕ, ನಾಗೇಶ್ ನೆರಿಯ ಮತ್ತು ಹರೀಶ್ ವಿ.ನೆರಿಯ ಇವರ ನೇತೃತ್ವದಲ್ಲಿ 60 ಭಜನಾ ತಂಡಗಳಿಂದ ಕುಣಿತ ಭಜನೆ, 60 ಬೈಕ್ ರಾಲಿಗಳು, ಕೃಷ್ಣವೇಶ, ಚೆಂಡೆ ವಾದ್ಯ, ಕೀಲು ಕುದುರೆ, ವಿಶ್ವಹಿಂದೂ ಪರಿಷತ್ ಸಾಧನೆಯ ಸವಿನೆನಪುಗಳ ಪ್ರದರ್ಶನ ಆಕರ್ಷಣೆಯವಾಗಿತ್ತು.
ವಿಶ್ವಹಿಂದೂ ಪರಿಷತ್ ಸ್ಥಾಪನಾ ದಿನದ ಷಷ್ಠಿ ಪೂರ್ತಿ ಸಮಾರೋಪ ಸಂಭ್ರಮದ ಅಧ್ಯಕ್ಷತೆಯನ್ನು ವಿಶ್ವ ಹಿಂದೂ ಪರಿಷತ್ ಷಷ್ಠಿ ಪೂರ್ತಿ ಉತ್ಸವ ಸಮಿತಿಯ ಅಧ್ಯಕ್ಷರಾದ ಡಾ.ಎಂ.ಎಂ.ದಯಾಕರ್ ಅಧ್ಯಕ್ಷತೆಯನ್ನು ವಹಿಸಿದ್ದರು.ಉದ್ಘಾಟನೆಯನ್ನು ಶ್ರೀ ಜನಾರ್ಧನ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶರತ್ ಕೃಷ್ಣ ಪಡ್ವೆಟ್ನಾಯ ಉದ್ಘಾಟನೆಯನ್ನು ಮಾಡಿದರು.
ದಿಕ್ಸೂಚಿ ಭಾಷಣಕಾರರಾಗಿ ಮಂಗಳೂರು ವಿಶ್ವ ಹಿಂದೂ ಪರಿಷತ್ ವಿಭಾಗದ ಕಾರ್ಯದರ್ಶಿ ದೇವಿ ಪ್ರಸಾದ್ ಶೆಟ್ಟಿ ದಿಕ್ಸೂಚಿ ಭಾಷಣ ಮಾಡಿದರು ಕಾರ್ಯಕ್ರಮದಲ್ಲಿ ಬೆಳ್ತಂಗಡಿ ತಾಲೂಕು ಶಾಸಕರಾದ ಹರೀಶ್ ಪೂಂಜಾ, ವಿಧಾನ ಪರಿಷತ್ ಶಾಸಕರಾದ ಪ್ರತಾಪ್ ಸಿಂಹ ನಾಯಕ್, ಬೆನಕ ಹೆಲ್ತ್ ಸೆಂಟರ್ ಮುಖ್ಯಸ್ಥರಾದ ಭಾರತಿ ಜಿ.ಕೆ, ಪುತ್ತೂರು ತಾಲೂಕಿನ ವಿಶ್ವಹಿಂದೂ ಪರಿಷತ್ ಕಾರ್ಯದರ್ಶಿಯಾದ ನವೀನ್ ನೆರಿಯ, ಗುರುವಾಯನಕೆರೆ ಎಕ್ಸೆಲ್ ಕಾಲೇಜಿನ ಆಡಳಿತ ನಿರ್ದೇಶಕರಾದ ಸುಮಂತ್ ಕುಮಾರ್ ಜೈನ್, ನಾರಾಯಣ ಗೌಡ ಕೊಳಂಬೆ, ವಿಶ್ವ ಹಿಂದೂ ಪರಿಷತ್ ಷಷ್ಠಿ ಪೂರ್ತಿ ಉತ್ಸವ ಸಮಿತಿಯ ಕಾರ್ಯದರ್ಶಿ ಭುವನೇಶ್ ಗೇರುಕಟ್ಟೆ, ಕೋಶಾಧಿಕಾರಿ ಪದ್ಮನಾಭ ಶೆಟ್ಟಿ ಗಾರ್, ಆರ್.ಎಸ್.ಎಸ್ ಮುಖಂಡ ಸಂತೋಷ್ ಕಾಪಿನಡ್ಕ, ವಿಶ್ವ ಹಿಂದೂ ಪರಿಷತ್ ಷಷ್ಠಿಪೂರ್ತಿ ಉತ್ಸವ ಸಮಿತಿಯ ಸಂಚಾಲಕ ಸಂಪತ್ ಬಿ.ಸುವರ್ಣ ಸ್ವಾಗತಿಸಿ, ಮೋಹನ್ ಬೆಳ್ತಂಗಡಿ ಧನ್ಯವಾದವಿತ್ತರು.