ಬೆಳ್ತಂಗಡಿ: ಕಥೊಲಿಕ್ ಕ್ರೆಡಿಟ್ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ- 308 ಕೋಟಿ ರೂ. ವ್ಯವಹಾರ, 1.67 ಕೋಟಿ ರೂ.ಲಾಭ, ಶೇ.25 ಡಿವಿಡೆಂಡ್ ಘೋಷಣೆ

0

ಬೆಳ್ತಂಗಡಿ: ಬೆಳ್ತಂಗಡಿ ಕಥೊಲಿಕ್ ಕ್ರೆಡಿಟ್ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಆ.31ರಂದು ಬೆಳ್ತಂಗಡಿ ಸಿವಿಸಿ ಹಾಲ್ ನಲ್ಲಿ ಜರಗಿತು.ಸಂಘದ ಅಧ್ಯಕ್ಷ ಹೆನ್ರಿ ಲೋಬೊ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘದ ಸದಸ್ಯರಿಗೆ ಶೇ.25 ಡಿವಿಡೆಂಡ್ ಘೋಷಿಸಿದರು. ಸಂಘವು 2023-24ನೇ ಸಾಲಿನಲ್ಲಿ ರೂ.308 ಕೋಟಿ ವ್ಯವಹಾರ ನಡೆಸಿ ರೂ.1.67 ಕೋಟಿ ಲಾಭ ಗಳಿಸಿದೆ. ರೂ.89.11ಕೋಟಿ ಠೇವಣಿ ಸಂಗ್ರಹವಾಗಿದೆ.ಸಂಘದಲ್ಲಿ ಒಟ್ಟು 2647ಎ ವರ್ಗದ ಸದಸ್ಯರನ್ನು ಹೊಂದಿದ್ದು ರೂ.94 ಲಕ್ಷ ಪಾಲು ಬಂಡವಾಳ ಸಂಗ್ರಹವಾಗಿರುತ್ತದೆ. ಸಂಘವು 28ನೇ ವರ್ಷಕ್ಕೆ ಪಾದಾರ್ಪಣೆಗೈಯುತ್ತಿರುವ ಈ ಸಂದರ್ಭದಲ್ಲಿ ಸಂಘಕ್ಕೆ ಸ್ವಂತ ಕಟ್ಟಡಕ್ಕೆ ಸ್ಥಳ ಖರೀದಿಸಲಾಗಿದ್ದು ನೂತನ ಕಟ್ಟಡ ಕಾಮಗಾರಿಯು ಪ್ರಗತಿ ಹಂತದಲ್ಲಿದೆ ಎಂದು ಅಧ್ಯಕ್ಷರು ಮಹಾಸಭೆಯಲ್ಲಿ ತಿಳಿಸಿದರು.

ಸಂಘದ ಸದಸ್ಯರ 22 ಮಕ್ಕಳಿಗೆ ರೂ.1.65 ಲಕ್ಷ ವಿದ್ಯಾರ್ಥಿ ವೇತನ ವಿತರಿಸಲಾಯಿತು. ನಿವೃತ್ತಿ ಹೊಂದಲಿರುವ ಬೆಳ್ತಂಗಡಿ ಶಾಖಾ ವ್ಯವಸ್ಥಾಪಕಿ ಮಲ್ಲಿಕಾ ಮೋನಿಸ್ ಇವರನ್ನು ಸನ್ಮಾನಿಸಲಾಯಿತು.ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಡೇನಿಸ್ ಸಿಕ್ವೇರಾ, ನಿರ್ದೇಶಕರುಗಳಾದ ಜೇಮ್ಸ್ ಡಿ’ಸೋಜ, ಹೆರಾಲ್ಡ್ ಪಿಂಟೊ, ಜೋಸೆಫ್ ಪೀಟ‌ರ್ ಸಲ್ಡಾನ್ಹಾ, ಅಲ್ಫೋನ್ಸ್ ರೊಡ್ರಿಗಸ್, ವಿನ್ಸೆಂಟ್ ಪ್ರಕಾಶ್ ಪಿಂಟೊ, ತೋಮಸ್ ಆರ್.ನೊರೊನ್ಹಾ, ಪ್ರಸಾದ್ ಪಿಂಟೊ, ರಫಾಯಲ್ ವೇಗಸ್, ಪೌಲಿನ್ ರೇಗೊ, ಪ್ಲಾವಿಯಾ ಡಿ’ಸೋಜಾ, ವಿನಯ್ ಜಾನ್ಸನ್ ಡಿಸೋಜ, ರಿಯೋ ಮೈಕಲ್ ರೊಡ್ರಿಗಸ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಐವನ್ ಗೊನ್ಸಾಲ್ವಿಸ್ ಉಪಸ್ಥಿತರಿದ್ದರು.

ಅಳದಂಗಡಿ ಶಾಖಾ ವ್ಯವಸ್ಥಾಪಕ ಜೆರೋಮ್ ಡಿ’ಸೋಜ, ನಾರಾವಿ ಶಾಖಾ ವ್ಯವಸ್ಥಾಪಕ ವಾಲ್ಟರ್ ಡಿ’ಸೋಜ, ಕೇಂದ್ರ ಕಛೇರಿ ವ್ಯವಸ್ಥಾಪಕಿ ಕು.ಮಲ್ಲಿಕಾ ಮೊನಿಸ್, ವೇಣೂರು ಶಾಖಾ ವ್ಯವಸ್ಥಾಪಕಿ ಶಾಂತಿ ಸಿ.ಡಿ., ಸಿಬಂದಿಗಳಾದ ಮೀನಾ ಮಿರಾಂದ, ಸುನಿತಾ ಪಾಯ್ಸ್, ಅಜಯ್ ರೊಡ್ರಿಗಸ್, ವಿಲ್ಫ್ರೆಡ್ ಡಿಸೋಜ, ಲ್ಯಾನ್ಸಿ ಲೋಬೊ, ಜಾನೆಟ್ ಜೆಸ್ವಿಟಾ ಕ್ರಾಸ್ತಾ, ಪ್ರತಿಮಾ ಪ್ಲಾವಿಯಾ ಕ್ರಾಸ್ತಾ, ರಶ್ಮಿ ಲೋಬೊ, ರೋಯಲ್ ಮೋರಸ್, ಜೋಯಲ್ ಡಿ’ಸೋಜಾ, ಸೋಹನ್ ವಿಶಾಲ್ ವೇಗಸ್, ಸ್ಟೆಲ್ಲಾ ಲೋಬೊ, ವಿನೋದ್ ಡಿ’ಸೋಜಾ ಸಹಕರಿಸಿದರು.

ಅಧ್ಯಕ್ಷ ಹೆನ್ರಿ ಲೋಬೊ ಸ್ವಾಗತಿಸಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಐವನ್ ಗೊನ್ಸಾಲ್ವಿಸ್ ವರದಿ, ಲೆಕ್ಕ ಪತ್ರ ಮಂಡಿಸಿದರು. ಉಪಾಧ್ಯಕ್ಷ ಡೇನಿಸ್ ಸಿಕ್ವೇರಾ ವಂದಿಸಿದರು. ನಿರ್ದೇಶಕ ವಿನಯ್ ಜಾನ್ಸನ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.

ಮಹಾಸಭೆಯಲ್ಲಿ ಸ್ಥಾಪಕ ಪ್ರವರ್ತಕ ಪೀಟರ್ ಕ್ಯಾಲಿಸ್ಟ್ ಡಿಸೋಜಾ, ಫ್ರಾಂಕಿ ಡಿಸೋಜಾ, ಲ್ಯಾನ್ಸಿ ಪಿರೇರಾ, ಮಾಜಿ ಅಧ್ಯಕ್ಷ ವಲೇರಿಯನ್ ರೊಡ್ರಿಗಸ್, ಮಾಜಿ ಉಪಾಧ್ಯಕ್ಷರುಗಳಾದ ಆಲ್ಫೋನ್ಸ್ ಫ್ರಾಂಕೊ, ಜಾನ್ ಅರ್ವಿನ್ ಡಿಸೋಜಾ, ಆಲ್ಬರ್ಟ್ ಡಿಸೋಜಾ, ಜೋಸೆಫೀನ್ ಪಿಂಟೊ, ಸಿಪ್ರಿಯನ್ ಫೆರ್ನಾಂಡಿಸ್, ಮಾಜಿ ನಿರ್ದೇಶಕರಾದ ಎಲಿಯಾಸ್ ಪಾಯ್ಸ್, ರುಡಾಲ್ಫ್ ಡಿ’ಸೋಜ, ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಸಂಘದ ಅಭಿವೃದ್ಧಿಗಾಗಿ ಸಂಘದ ಸದಸ್ಯರಾದ ಫಿಲಿಫ್ ರೊಡ್ರಿಗಸ್, ಲ್ಯಾನ್ಸಿ ಎ.ಪಿರೇರಾ, ವಲೇರಿಯನ್ ರೊಡ್ರಿಗಸ್, ಫ್ರಾಂಕಿ ಡಿಸೋಜಾ, ಸಿಪ್ರಿಯನ್ ಫೆರ್ನಾಂಡಿಸ್ ಸಲಹೆ ಸೂಚನೆ ನೀಡಿ ಚರ್ಚಿಸಿದರು.

LEAVE A REPLY

Please enter your comment!
Please enter your name here