ಮೂಡುಕೋಡಿ: ಬೆದ್ರಡ್ಕದಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ ಆಚರಣೆ

0

ಮೂಡುಕೋಡಿ: ಶ್ರಿ ಕ್ರಷ್ಣ ಜನ್ಮಾಷ್ಟಮಿ ಆಚರಣೆ ಸರ್ವರನ್ನೂ ಒಗ್ಗೂಡಿಸುವ ಆಚರಣೆ ಆಗಬೇಕು.ಈ ನಿಟ್ಟಿನಲ್ಲಿ ಎಲ್ಲರನ್ನೂ ಒಟ್ಟು ಸೇರಿಸಿ ಆಚರಿಸುವ ಮೂಡುಕೋಡಿಯ ಸಾಮರಸ್ಯದ ಮೊಸರು ಕುಡಿಕೆ ಉತ್ಸವ ಸಮಾಜಕ್ಕೆ ಮಾದರಿ ಎಂದು ವೇಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸ೦ಘದ ಅಧ್ಯಕ್ಷ ಸುಂದರ ಹೆಗ್ಡೆ ಹೇಳಿದರು. ಅವರು ಆ.27ರಂದು ಮೂಡುಕೋಡಿ ಬೆದ್ರಡ್ದದಲ್ಲಿ ನಡೆದ 4ನೇ ವರ್ಷದ ಮೊಸರು ಕುಡಿಕೆ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಮೊಸರು ಕುಡಿಕೆ ಉತ್ಸವದ ಅಧ್ಯಕ್ಷ ಪುರೋಹಿತ ಗಣೇಶ್ ನಾರಾಯಣ ಪ೦ಡಿತ್ ವಹಿಸಿದ್ದರು.

ಮುಖ್ಯ ಅತಿಥಿಗಳಾದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಯ೦ತ್ ಕೋಟ್ಯಾನ್ ಮಾತನಾಡಿ ಶ್ರೀಕೃಷ್ಣನ ಸಂದೇಶವನ್ನು ನಿಜ ಜೀವನದಲ್ಲಿ ಅಳವಡಿಸೋಣ ಎಂದರು. ಇನ್ನೋರ್ವ ಮುಖ್ಯ ಅತಿಥಿ ನ್ಯಾಯವಾದಿ ನಾಗೇಶ್ ಶೆಟ್ಟಿ ಡಿ. ನಾವೆಲ್ಲರೂ ಸೇರಿ ಪ್ರಾರಂಭಿಸಿದ ಮೊಸರು ಕುಡಿಕೆ ಉತ್ಸವ ನಿರ೦ತರವಾಗಿ ಸಾಗಲಿ ಎಂದರು.

ವೇಣೂರು ಗ್ರಾಮ ಪ೦ಚಾಯತ್ ಉಪಾಧ್ಯಕ್ಷ ಉಮೇಶ್ ಎನ್., ಹಾಲು ಉತ್ಪಾದಕರ ಸಹಕಾರಿ ಸ೦ಘದ ಅಧ್ಯಕ್ಷ ಪ್ರಕಾಶ್ ಭಟ್, ಪ೦ಚಾಯತ್ ಸದಸ್ಯರಾದ ವೀಣಾ ದೇವಾಡಿಗ, ಪ್ರಮುಖರಾದ ರತ್ನರಾಜ ಭ೦ಗ ಜಕ್ರಿಯಾ, ಕಾರ್ಯದರ್ಶಿ ನಿಖಿಲ್ ಡಿ.ಶೆಟ್ಟಿ ಉಪಸ್ಥಿತರಿದ್ದರು.ಗೌರವ ಅಧ್ಯಕ್ಷ ಶಶಿಧರ ಶೆಟ್ಟಿ ನಾರಡ್ಕ ಸ್ವಾಗತಿಸಿ, ಪ೦ಚಾಯತ್ ಸದಸ್ಯ ಅನೂಪ್ ಜೆ. ಪಾಯಸ್ ವ೦ದಿಸಿದರು.ಕ೦ಬಳದ ಖ್ಯಾತ ನಿರೂಪಕ ಸತೀಶ್ ಹೊಸ್ಮಾರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here