ಕುವೆಟ್ಟು: ಕುವೆಟ್ಟು ಗ್ರಾಮ ಪಂಚಾಯತ್ 2024-25ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆ ಆ.28ರಂದು ಇತ್ತು.ಆದರೆ ಇಲಾಖೆ ಅಧಿಕಾರಿಗಳು ಇಲ್ಲದ ಕಾರಣ ಗ್ರಾಮಸ್ಥರು ಇಲಾಖೆ ಅಧಿಕಾರಿಗಳು ಗ್ರಾಮ ಸಭೆಗೆ ಬರಬೇಕು ಇಲ್ಲದಿದ್ದರೆ ಗ್ರಾಮ ಸಭೆಯನ್ನು ರದ್ದು ಮಾಡಿ ಎಂದು ಹೇಳಿದರು.
ಮೆಸ್ಕಾಂ ಇಲಾಖೆ, ಪಿ.ಡ.ಬ್ಯೂ ಇಲಾಖೆ, ಪೋಲಿಸ್ ಇಲಾಖೆ, ಶಿಕ್ಷಣ ಇಲಾಖೆ ಈ ನಾಲ್ಕು ಇಲಾಖೆಯವರು ಗ್ರಾಮ ಸಭೆಗೆ ಬಾರದ ಕಾರಣ ಗ್ರಾಮಸಭೆಯನ್ನು ರದ್ದು ಮಾಡಿದೆ ಈ ನಾಲ್ಕು ಇಲಾಖೆಯವರಿಂದ ಕುವೆಟ್ಟು ಗ್ರಾಮದಲ್ಲಿ ಹೆಚ್ಚು ಸಮಸ್ಯೆ ಇದ್ದು ಆ ಇಲಾಖೆಯವರೇ ಗ್ರಾಮ ಸಭೆಗೆ ಬರಲಿಲ್ಲ ಎಂದು ಗ್ರಾಮಸ್ಥರು ಪ್ರಶ್ನಿಸಿದರು.ಹಾಗಾಗಿ ನಾಲ್ಕು ಇಲಾಖೆಯವರು ಇಲ್ಲದ ಕಾರಣ ಗ್ರಾಮಸಭೆಯನ್ನು ರದ್ದು ಮಾಡಿ ಎಂದು ಗ್ರಾಮಸ್ಥರು ಪಟ್ಟು ಹಿಡಿದರು.ಹಾಗಾಗಿ ಇಲಾಖೆ ಅಧಿಕಾರಿಗಳು ಇಲ್ಲದ ಕಾರಣ ಗ್ರಾಮ ಸಭೆ ರದ್ದುಮಾಡಿದೆ ಮುಂದಿನ ಗ್ರಾಮ ಸಭೆಯನ್ನು 18-09-2024ರಂದು ನಡೆಯಲಿದೆ ಎಂದು ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಶೆಟ್ಟಿ ಹೇಳಿದರು.
ಈ ಸಂದರ್ಭದಲ್ಲಿ ಸಾಮಾಜಿಕ ವಲಯ ಅರಣ್ಯಾಧಿಕಾರಿ ಅಶೋಕ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಇಮ್ಮಿಯಾಜ್, ಉಪಾಧ್ಯಕ್ಷ ಗಣೇಶ್ ಕೆ, ಸದಸ್ಯರಾದ ಆನಂದ, ವೇದಾವತಿ, ಲಕ್ಷ್ಮೀಶ, ವನಿತಾ ಜಿ, ವಿಜಯಲಕ್ಷ್ಮಿ, ಸದಾನಂದ ಮೂಲ್ಯ, ನಿತೇಶ್ ಕೆ.ಓಡಿಲ್ನಾಳ, ಮಹಮ್ಮದ್, ನಿತಿನ್ ಕುಮಾರ್, ಪ್ರದೀಪ್ ಶೆಟ್ಟಿ, ಆಶಾಲತಾ, ಕೆ.ಮಂಜುನಾಥ್, ರಚನಾ, ಹೇಮಂತ್, ಉಷಾ, ಶಾಲಿನಿ, ಸುಮಂಗಲಾ, ಸಿಲ್ವೆಸ್ಟರ್ ಫೆಲಿಕ್ಸ್ ಮೋನಿಸ್, ಎಂ ರಿಯಾಜ್, ಅಮೀನಾ ಹಾಗೂ ಪಂಚಾಯತ್ ಸಿಬ್ಬಂದಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು ಉಪಸ್ಥಿತರಿದ್ದರು.