ಉಜಿರೆ: ಕುಂಟಿನಿ ಅಲ್ ಬುಖಾರಿ ಹಾಗೂ ಮುಹಿಯುದ್ದೀನ್ ಅರಬಿಕ್ ಸೆಕೆಂಡರಿ ಮದ್ರಸ ಇದರ ಆಡಳಿತ ಸಮಿತಿಯ ಮಹಾಸಭೆ ಆ.25ರಂದು ನೂತನ ಉಜಿರೆಯ ಮದ್ರಸ ಹಾಲ್ ನಲ್ಲಿ ನಡೆಯಿತು.ಕೇಂದ್ರ ಮಸೀದಿಯ ಅಧ್ಯಕ್ಷ ಬಿ.ಎಮ್ ಹಮೀದ್ ಹಾಜಿ ರವರ ಅಧ್ಯಕ್ಷತೆಯಲ್ಲಿ ನೂತನ ಮದ್ರಸ ಹಾಲ್ ನಲ್ಲಿ ನಡೆಯಿತು.
ಸದರ್ ಉಸ್ತಾದ್ ಉಮರುಲ್ ಫಾರೂಖ್ ಸಅದಿ ಪದ್ಮುಂಜ ದುವಾ ನಿರ್ವಹಿಸಿದರು. ನೂತನ ಅಧ್ಯಕ್ಷರಾಗಿ ಅಲ್ ಹಾಜ್ ಸಯ್ಯದ್ ಹುಸೈನ್ ತಂಗಳ್ ಕುಂಟಿನಿ, ಉಪಾಧ್ಯಕ್ಷರಾಗಿ ಹೈದರ್ ಫಿಶ್ ಕುಂಟಿನಿ, ಪ್ರ.ಕಾರ್ಯದರ್ಶಿಯಾಗಿ ಸುಲೈಮಾನ್ ಬದ್ರಿಯಾ ಹಾಗೂ ಕೋಶಾಧಿಕಾರಿಯಾಗಿ ಮೊಯ್ದಿನ್ ಕುಂಟಿನಿ ಸರ್ವಾನುಮತದಿಂದ ಆಯ್ಕೆಯಾದರು.
ಮುಖ್ಯ ವೀಕ್ಷಕರಾಗಿ ಕೇಂದ್ರ ಮಸೀದಿ ಕಾರ್ಯದರ್ಶಿ ಮುಹಮ್ಮದ್ ಕೆ.ಎಸ್.ಆರ್.ಟಿ.ಸಿ ಹಾಗೂ ಕೋಶಾಧಿಕಾರಿ ಇಬ್ರಾಹಿಂ ವಾಫಿರ್ ಭಾಗವಹಿಸಿದ್ದರು. ಸಲಹೆಗಾರರಾಗಿ ಯೂಸುಫ್ ಹಾಜಿ, ಅಬೂಬಕ್ಕರ್ ಬಂಗಾಡಿ ಅಬೂಬಕ್ಕರ್ ಪಂಡಿತ್ ರನ್ನು ಆಯ್ಕೆ ಮಾಡಲಾಯಿತು.
29 ಸದಸ್ಯರನ್ನು ಒಳಗೊಂಡ ನೂತನ ಸಮೀತಿಗೆ ಹಾಜಿ ಅಬ್ದುಲ್ ಹಮೀದ್ ಶುಭ ಹಾರೈಸಿದರು.
p>