


ಉಜಿರೆ: ಉಜಿರೆ-ಧಮಸ್ಥಳ ಹಾದು ಹೋಗುವ ರಸ್ತೆಯ ಸಮೀಪದ ಬಸ್ ನಿಲ್ದಾಣದ ಮುಂಭಾಗ ಇರುವ ಹೈ-ಟೆಕ್ ಮೊಬೈಲ್ ಅಂಗಡಿಯಿಂದ ಆ.25ರಂದು ರಾತ್ರಿ ಇಬ್ಬರು ಯುವಕರು ಕಳವು ಯತ್ನ ಮಾಡುವಲ್ಲಿ ವಿಫಲವಾಗಿದ್ದಾರೆ.


ಕಾರಿನಲ್ಲಿ ಬಂದ ಯುವಕರ ತಂಡದಿಂದ ಕಳ್ಳತನ ಯತ್ನ ನಡೆಯುವುದನ್ನು ಗಮನಿಸಿ ತಕ್ಷಣ ಎಚ್ಚೆತ್ತುಕೊಂಡು ಸಮೀಪದ ಅಂಗಡಿ ಮಾಲೀಕ ಸ್ಥಳಕ್ಕೆ ಧಾವಿಸಿ ಕಳ್ಳತನವನ್ನು ತಪ್ಪಿಸಿದ್ದಾರೆ.
ತಕ್ಷಣ ಮೊಬೈಲ್ ಅಂಗಡಿ ಮಾಲೀಕರಿಗೆ ತಿಳಿಸಿರುತ್ತಾರೆ.ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳತನದ ದೃಶ್ಯವು ಅಂಗಡಿಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.


            






