ಉಜಿರೆ: “ದೈಹಿಕ ಮಾನಸಿಕ ಒತ್ತಡ ನಿವಾರಿಸಿ ಕ್ಷಮತೆ ಹೆಚ್ಚಿಸಲು ಯೋಗ ಅಗತ್ಯ” ಭಾರತದ ಪುರಾತನ ಸಂಸ್ಕ್ರಿತಿಯೊಂದಿಗೆ ಮಿಳಿತಗೊಂಡಿರುವ ಯೋಗ ವಿದ್ಯಾರ್ಥಿಗಳಲ್ಲಿ ದೈಹಿಕ ಮಾನಸಿಕ ಒತ್ತಡ ನಿವಾರಿಸಿ ಏಕಾಗ್ರತೆ ಸಾಧಿಸಿ ಕ್ಷಮತೆ ಹೆಚ್ಚಿಸುತ್ತದೆ.ಆದ್ದರಿಂದ ವಿದ್ಯಾರ್ಥಿಗಳು ಪ್ರತಿದಿನ ಯೋಗ ಸಾಧನೆಯಲ್ಲಿ ತೊಡಗಿದರೆ ಅವರ ವಿದ್ಯೆಗೂ ಅನುಕೂಲವಾಗುತ್ತದೆ ಎಂದು ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ ಪೂರನ್ ವರ್ಮಾ ಅವರು ಕಲ್ಮಂಜ ಪ್ರೌಢಶಾಲೆಯಲ್ಲಿ ಬೆಳ್ತಂಗಡಿ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ-ಬಾಲಕಿಯರ ಯೋಗಾಸನ ಸ್ಪರ್ಧೆ ಉದ್ಫಾಟಿಸಿ ಮಾತನಾಡಿದರು.
ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಕಾರ್ಯಾಧ್ಯಕ್ಷ ಮಂಜುನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕಿ ಪೂರ್ಣಿಮಾ ಪ್ರಾಸ್ತಾವಿಸಿ ಸ್ವಾಗತಿಸಿದರು. ವೇದಿಕೆಯಲ್ಲಿ ಕಲ್ಮಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಮಲಾ,ˌಉಪಾಧ್ಯಕ್ಷೆ ಪೂರ್ಣಿಮಾ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಜಯ, ಬೆಳ್ತಂಗಡಿ ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಕೃಷ್ಣಾನಂದ,ˌಮುಖ್ಯ ತೀರ್ಪುಗಾರ ಅಜಿತ್ ಕುಮಾರ್ ಕೊಕ್ರಾಡಿ ಉಪಸ್ಥಿತರಿದ್ದರು.
ಶಾಲಾಭಿವೃದ್ಧಿ ಸಮಿತಿ ಸದಸ್ಯರು ಹಾಗೂ ಶಿಕ್ಷಕಿಯರಾದ ಪ್ರೇಮಲತಾ, ಸಾವಿತ್ರಿ ಸಿ.ಡಿ, ಸವಿತಾ, ಪ್ರೇಮಾ, ಯಚ್ ವಿˌ ಸುಧೀಂದ್ರ ಸಹಕರಿಸಿದರು.
ಕಾರ್ಯಕ್ರಮವನ್ನು ಮಾಲಿನಿ ಹೆಗಡೆ ನಿರೂಪಿಸಿ, ಹೇಮಲತಾ ವಂದಿಸಿದರು.