ಬೆಳ್ತಂಗಡಿ: ಹಝ್ರತ್ ಶೈಖ್ ಹಯಾತುಲ್ ಔಲಿಯಾ ದರ್ಗಾ ಶರೀಫ್ ಮತ್ತು ಜುಮ್ಮಾ ಮಸ್ಜಿದ್ ಗುರುವಾಯನಕೆರೆ ಇದರ ಮುಂದಿನ ಸಾಲಿನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಉದ್ಯಮಿ ಹಾಗೂ ಸಂಘಟಕ ಹಾಜಿ ಅಬ್ದುಲ್ ಲೆತೀಫ್ (ಎಸ್.ಎಂ.ಎಸ್), ಪ್ರಧಾನ ಕಾರ್ಯದರ್ಶಿಯಾಗಿ ನಿಝಾರ್ ಕೋಂಟುಪಲಿಕೆ ಹಾಗೂ ಕೋಶಾಧಿಕಾರಿಯಾಗಿ ಮುತ್ತಲಿಬ್ ಬದ್ರಿಯಾ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉಳಿದಂತೆ ಉಪಾಧ್ಯಕ್ಷರುಗಳಾಗಿ ಕೆ.ಎ ಉಸ್ಮಾನ್ ಬಳಂಜ ಮತ್ತು ಜಿ.ಕೆ ಉಮರಬ್ಬ, ಜೊತೆ ಕಾರ್ಯದರ್ಶಿಗಳಾಗಿ ಸೈಯ್ಯದ್ ಕೋಂಟುಪಲಿಕೆ ಮತ್ತು ಉಸ್ಮಾನ್ ಆಲಾದಿಕೊಟ್ಟಿಗೆ, ಸದಸ್ಯರುಗಳಾಗಿ ಹಾಜಿ ಉಸ್ಮಾನ್ ಶಾಫಿ ಬಿಬಿಎಸ್, ದಾವೂದ್ ಕೆ.ಪಿ, ಇಸಾಕ್ ಜಿ, ಅಬ್ದುಲ್ ರಹಿಮಾನ್, ಅಶ್ರಫ್ ಹೊಟೇಲ್, ಹನೀಫ್ ಅರಫ, ಮುಹಮ್ಮದ್ ಹನೀಫ್ ಕೆ.ಪಿ, ಆಸಿಫ್ ಕೆ.ಪಿ, ಆದಂ ಆಲಾದಿಕೊಟ್ಟಿಗೆ, ಅಬ್ದುಲ್ ಅಝೀಝ್ ಬಳಂಜ, ಸುಲೈಮಾನ್ ರಿಕ್ಷ ಕೆ.ಪಿ, ಹೈದರ್ ಕೆ.ಪಿ, ಫಾರೂಕ್ ಆಲಾದಿಕೊಟ್ಟಿಗೆ, ಇಮ್ತಿಯಾಝ್ ಜಿ.ಕೆ, ಸ್ವಾದಿಕ್ ಮೇಲಂತಬೆಟ್ಟು, ಇಬ್ರಾಹಿಂ ಆಂಬುಲೆನ್ಸ್, ಮುಸ್ತಫಾ ಕೋಂಟುಪಲಿಕೆ, ಹಾಜಿ ಮುಹಮ್ಮದ್ ಶರೀಫ್ ಜಿ.ಕೆ, ಯಾಕೂಬ್ ಮುಸ್ಲಿಯಾರ್, ಖಲಂದರ್ ಸಅದಿ, ಸಿರಾಜ್ ಆಲಾದಿಕೊಟ್ಟಿಗೆ, ಸಲೀಮ್ ಎಸ್.ಟಿ.ಡಿ, ಹಮೀದ್ ಮೇಲಂತಬೆಟ್ಟು, ಮುಹಮ್ಮದ್ ಜಿ.ಕೆ (ಫಿಶ್) ಮತ್ತು ಅಬ್ದುಲ್ಲ ರಿಕ್ಷಾ ಇವರು ಆಯ್ಕೆಯಾಗಿದ್ದಾರೆ. ಲೆಕ್ಕಪರಿಶೋಧಕರಾಗಿ ಹಾಜಿ ಹಸೈನಾರ್ ಶಾಫಿ ಗುರುವಾಯನಕೆರೆ ಇವರನ್ನು ಆರಿಸಲಾಯಿತು.