ಮಡಂತ್ಯಾರು: ಮಚ್ಚಿನ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯ ಪ್ರಕಾಶ್ ನಾಯ್ಕ್ ವಹಿಸಿದ್ದರು.
ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್ ಕಾರ್ಯಕ್ರಮ ಉದ್ಘಾಟಿಸಿ ವಿಶ್ವ ಸಂಸ್ಥೆ ಗುರುತಿಸಿದ ಆರು ಮಾರಕ ಕಾಯಿಲೆಗಳಲ್ಲಿ ಮಾದಕ ಚಟವು ಕೂಡ ಒಂದು.ಯಾವುದೇ ಚಟಗಳು ಮಿತಿ ಮೀರಿದಾಗ ಅದಕ್ಕೆ ಮನಸ್ಸು ಹೊಂದಿಕೊಳ್ಳುತ್ತದೆ.ಇಡೀ ಪ್ರಪಂಚದಲ್ಲಿ ಒಂದನೆಯ ಸೈಲೆಂಟ್ ಕಿಲ್ಲರ್ ಧೂಮಪಾನ, ಎರಡನೆಯದ್ದು ಮದ್ಯಪಾನ ಹಾಗಾಗಿ ವಿದ್ಯಾರ್ಥಿಗಳು ಇಂಥಹ ಚಟಗಳಿಗೆ ಬಲಿಯಾಗಿ ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳಬಾರದು ಕಲಿಕೆಯ ಜೊತೆಗೆ ಜೀವನದ ಪಾಠದಲ್ಲಿ ಕೂಡ ಉತ್ತೀರ್ಣರಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕು ಜನಜಾಗೃತಿ ಸಮಿತಿ ಸದಸ್ಯ ಗೋಪಾಲ್ ಕೊಲಾಜೆ, ವಲಯ ಅಧ್ಯಕ್ಷ ಜಯ ಪೂಜಾರಿ, ಮಚ್ಚಿನ ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ಹರ್ಷ ಬಳ್ಳಮಂಜ, ಮಚ್ಚಿನ ಸೇವಾಪ್ರತಿನಿಧಿ ಪರಮೇಶ್ವರ್, ಕುದ್ರಡ್ಕ ಸೇವಾಪ್ರತಿನಿಧಿ ನಂದಿನಿ, ಶಾಲಾ ಶಿಕ್ಷಕರು, ಶಾಲಾ ಮಕ್ಕಳು ಭಾಗವಹಿಸಿದ್ದರು.