

ಕೊಕ್ಕಡ: ಇಲ್ಲಿನ ಲಕ್ಷ್ಮೀ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಸುಳ್ಯದ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಕೊಕ್ಕಡ ಶಾಖೆಯು ತನ್ನ ಯಶಸ್ವಿ ಮೂರು ವರ್ಷಗಳನ್ನು ಪೂರೈಸಿ 4ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ.

ಆ ಪ್ರಯುಕ್ತ ಶಾಖೆಯಲ್ಲಿ ಗಣಪತಿ ಹವನ ಮತ್ತು ಲಕ್ಷ್ಮೀ ಪೂಜೆ ಆ.21ರಂದು ನಡೆಯಿತು. ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಪಿ.ಸಿ ಜಯರಾಮ, ಉಪಾಧ್ಯಕ್ಷ ಮೋಹನರಾಂ ಸುಳ್ಳಿ, ಮಾಜಿ ಉಪಾಧ್ಯಕ್ಷ ಹಾಗೂ ನಿರ್ದೇಶಕ ಪಿ.ಎಸ್. ಗಂಗಾಧರ, ಕಾರ್ಯನಿರ್ವಹಣಾಧಿಕಾರಿ ಕೆ.ಟಿ ವಿಶ್ವನಾಥ ಹಾಗೂ ಸಂಘದ ಸದಸ್ಯರು, ಗ್ರಾಹಕರು ಭಾಗವಹಿಸಿ ಶುಭಹಾರೈಸಿದರು.
ಶಾಖಾ ವ್ಯವಸ್ಥಾಪಕ ಸುನಿಲ್ ಮುಂಡೋಡಿ, ಸಿಬ್ಬಂದಿಗಳಾದ ಮನೀಶ್, ವೇಣುಗೋಪಾಲ, ಕಿರಣ್ ಆಗಮಿಸಿದವರನ್ನು ಸ್ವಾಗತಿಸಿದರು.