ಶ್ರೀ ರಾಮ ಕ್ಷೇತ್ರದ ಸ್ವಾಮೀಜಿಯವರಿಂದ ನಿವೃತ್ತ ಶಿಕ್ಷಕ ರಾಮಕೃಷ್ಣ ಭಟ್ ಚೊಕ್ಕಾಡಿಯವರಿಗೆ ಸನ್ಮಾನ

0

ಬೆಳಾಲು: ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನಂ ಪೀಠಾಧಿಪತಿ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ್ಯ ವೃತವು ಶ್ರೀಮಠದ ಶಾಖೆ ಭಟ್ಕಳದ ಕರಿಕಲ್ಲಿನಲ್ಲಿ ಜರಗುತ್ತಿದೆ.

ಈ ಸಂದರ್ಭದಲ್ಲಿ ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ರಾಮಕೃಷ್ಣ ಭಟ್ ಚೊಕ್ಕಾಡಿಯವರು ಸ್ವಾಮೀಜಿಯವರನ್ನು ಭೇಟಿ ಮಾಡಿದ್ದು ಈ ಸಂದರ್ಭದಲ್ಲಿ ಶ್ರೀಯುತರನ್ನು ಕ್ಷೇತ್ರದ ವತಿಯಿಂದ ಶಾಲೆ ಹೊದೆಸಿ, ಸ್ಮರಣಿಕೆ ಮತ್ತು ಫಲ-ತಾಂಬೂಲವನ್ನಿತ್ತು ಸ್ವಾಮೀಜಿಯವರು ಸನ್ಮಾನಿಸಿ ಗೌರವ ಸಲ್ಲಿಸಿದರು.

ಇವರು ಕಳೆದ 23 ವರ್ಷಗಳಿಂದ ಬೆಳಾಲು ಪ್ರೌಢಶಾಲೆಯಲ್ಲಿ ಸಾರ್ಥಕ ಶಿಕ್ಷಕ ಸೇವೆಯನ್ನು ಸಲ್ಲಿಸಿರುತ್ತಾರೆ ಎಂದು ಅಭಿನಂದಿಸಿ ಹರಸಿದರು. ಇವರ ಜೊತೆಗೆ ಯಕ್ಷಗಾನ ಅಕಾಡೆಮಿಯ ಸದಸ್ಯ ದಯಾನಂದ ಪಿ ಬೆಳಾಲುರವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here