ನೆರಿಯ: ಗಂಡಿಬಾಗಿಲು ಸಂತ ತೋಮಸರ ಸಭಾಭವನದಲ್ಲಿ ಉಚಿತ ಫೂಟ್ ಫಲ್ಸ್ ಥೆರಪಿ ಶಿಬಿರ

0

ನೆರಿಯ: ಗಂಡಿಬಾಗಿಲು ಸಂತ ತೋಮಸರ ದೇವಾಲಯ ಗಂಡಿಬಾಗಿಲು ಮತ್ತು ಕಂಪಾನಿಯೋ ನೆಮ್ಮದಿ ವೆಲ್ ನೆಸ್ ಸೆಂಟರ್ ಪುತ್ತೂರು ಇದರ ಜಂಟಿ ಆಶ್ರಯದಲ್ಲಿ ಸಂತ ತೋಮಸರ ಸಭಾಭವನದಲ್ಲಿ ಉಚಿತ ಫೂಟ್ ಫಲ್ಸ್ ಥೆರಪಿ ನಡೆಯುತ್ತಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು ಧರ್ಮಗುರುಗಳಾದ ರೆ.ಫಾ.ಜೋಸ್ ಆಯಾಂಕುಡಿ ನೆರವೇರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೆರಿಯ ಗ್ರಾಮ ಪಂಚಾಯತ್ ಅಧ್ಯಕ್ಷೆ ವಸಂತಿ ವಹಿಸಿದ್ದರು.ನೆಮ್ಮದಿ ವೆಲ್ ನೆಸ್ ಸೆಂಟರ್ ಪುತ್ತೂರು ಇವರು ಈ ಶಿಬಿರದಿಂದ ಜನರಿಗೆ ಸಿಗುವ ಪ್ರಯೋಜನದ ಬಗ್ಗೆ ಸವಿಸ್ತಾರವಾಗಿ ತಿಳಿಸಿಕೊಟ್ಟರು.

ಮುಖ್ಯ ಅಥಿತಿಗಳಾಗಿ ಸಂತ ತೊಮಸರ ದೇವಾಲಯದ ಟ್ರಸ್ಟಿ ಕುರಿಯನ್, ವಿನ್ಸೆoಟ್ ಡಿ ಪೌಲ್ ಸೊಸೈಟಿ ಅಧ್ಯಕ್ಷ ಶಾಜಿ, ನೆರಿಯ ಗ್ರಾಮ ಪಂಚಾಯತ್ ಸದಸ್ಯ ತೋಮಸ್ ವಿ.ಡಿ ಆಗಮಿಸಿ ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದರು.

p>

LEAVE A REPLY

Please enter your comment!
Please enter your name here