ಬಳಂಜ: ಅಟ್ಲಾಜೆ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ

0

ಬಳ೦ಜ: ಅಟ್ಲಾಜೆ ದ.ಕ.ಜಿ.ಪ೦.ಕಿ.ಪ್ರಾ ಶಾಲೆಯಲ್ಲಿ ಆ.15ರಂದು 78ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಶಾಲಾ ಎಸ್.ಡಿ.ಎ೦.ಸಿ ಅಧ್ಯಕ್ಷ ಜಗದೀಶ್ ಕೆ ರವರಿಂದ ಧ್ವಜಾರೋಹಣ ಕಾರ್ಯಕ್ರಮ ನೆರವೇರಿತು.ಮಕ್ಕಳ ಮೆರವಣಿಗೆ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಬೆಳ್ತಂಗಡಿಯ ಖ್ಯಾತ ವಕೀಲರು ಸರ್ವೋದಯ ಫ್ರೆ೦ಡ್ಸ್ ನ ಮಾರ್ಗದರ್ಶಕ ಸತೀಶ್ ರೈ ಬಾರ್ದಡ್ಕರವರು ಮಾತನಾಡಿ ಸ್ವಾತಂತ್ರ್ಯ ಹೋರಾಟಗಾರರು ನಮಗೆಲ್ಲರಿಗೂ ದಾರಿದೀಪ ಅವರ ಆದರ್ಶಗಳನ್ನು ಪಾಲಿಸುವುದು ಪ್ರತಿಯೊಬ್ಬ ಭಾರತೀಯನ ಆದ್ಯ ಕರ್ತವ್ಯವೆ೦ದು ತಿಳಿಸಿದರು.

ವೇದಿಕೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಜಗದೀಶ್ ಕೊ೦ಗುಲ, ಪ್ರಗತಿಪರ ಕೃಷಿಕ, ಹಿರಿಯರಾದ ಸಾ೦ತಪ್ಪ ಸುವರ್ಣ, ಶಾಲಾಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷ, ಶ್ಯಾಮ ಬ೦ಗೇರ ಪೆರಾಜೆ, ಬಳ೦ಜ ಗ್ರಾ.ಪ೦.ಮಾಜಿ ಅಧ್ಯಕ್ಷೆ ರತ್ನ ಹೇವ, ಸರ್ವೋದಯ ಫ್ರೆ೦ಡ್ಸ್ ಅಟ್ಲಾಜೆಯ ಅಧ್ಯಕ್ಷ ಸುರೇಶ್ ಹೇವ, ಶಾಲಾ ಮುಖ್ಯೋಪಾಧ್ಯಾಯ ಪ್ರಮೋದ ಎಸ್ ರವರು ಹಾಜರಿದ್ದರು.

ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.ಶಾಲಾ ಸಹ ಶಿಕ್ಷಕಿಯವರಾದ ಶ್ವೇತಾ.ಆರ್.ಡಿ ಯವರು ಕಾರ್ಯಕ್ರಮ ನಿರೂಪಿಸಿ, ವ೦ದಿಸಿದರು.

LEAVE A REPLY

Please enter your comment!
Please enter your name here