ಮುಂಡತ್ತೋಡಿ: ಯುವಕ ಮಂಡಲದಿಂದ ಮಕ್ಕಳಿಗೆ ಐಡಿ, ಬೆಲ್ಟ್ , ಟೈ ವಿತರಣೆ

0

ಉಜಿರೆ: ಮುಂಡತ್ತೋಡಿ ಸ.ಹಿ.ಪ್ರಾ ಶಾಲಾ ಮಕ್ಕಳಿಗೆ ಯುವಕ ಮಂಡಲ ವತಿಯಿಂದ ಆ 12ರಂದು ವಿದ್ಯಾರ್ಥಿಗಳಿಗೆ ಉಚಿತವಾಗಿ ಟೈ, ಬೆಲ್ಟ್ , ಐಡಿಯನ್ನು ವಿತರಿಸಲಾಯಿತು. ಮುಖ್ಯ ಅತಿಥಿಗಳಾಗಿ ಬದುಕು ಕಟೋಣ ತಂಡ ಉಜಿರೆ ಸಂಚಾಲಕ ಮೊಹನ್ ಕುಮಾರ್ ವಿತರಿಸಿದರು.

ಇವರನ್ನು ನಿವೃತ್ತ ಶಿಕ್ಷಕರಾದ ನರೇಂದ್ರ ಕುಮಾರ್ ಜೈನ್ ಇವರನ್ನು ಯುವಕ ಮಂಡಲದ ವತಿಯಿಂದ ಹಾಗೂ ಶಾಲಾವತಿಯಿಂದ ಗೌರವಿಸಲಾಯಿತು. ವೇದಿಕೆಯಲ್ಲಿ ದೇವರಾಜ್ ಹಾಗು ಯುವಕ ಮಂಡಲದ ಉಪಾಧ್ಯಕ್ಷರಾದ ಗುರುಪ್ರಸಾದ್, ಕಾರ್ಯದರ್ಶಿಗಳಾದ ಸುರೇಶ್, ಮುಖ್ಯೊಪಾದ್ಯಾರಾದ ಸೇವಂತಿ ಹಾಗೂ ಪೋಷಕರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಪ್ರೀತಿ ಕುಮಾರಿ ನಿರೂಪಿಸಿ, ಗುರುಪ್ರಸಾದ್ ಸ್ವಾಗತಿಸಿ, ಕೋಶಾಧಿಕಾರಿ ವೆಂಕಪ್ಪ ವಂದಿಸಿದರು.

LEAVE A REPLY

Please enter your comment!
Please enter your name here