ಮದ್ದಡ್ಕ ಎಸ್.ಕೆ.ಎಸ್.ಎಸ್.ಎಫ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

0

ಕುವೆಟ್ಟು: ಮದ್ದಡ್ಕ ಎಸ್.ಕೆ.ಎಸ್.ಎಸ್.ಎಫ್ ವತಿಯಿಂದ ಮದ್ದಡ್ಕ ಮಸೀದಿ ಬಳಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವಿಜೃಂಭನೆಯಿಂದ ಆಚರಿಸಲಾಯಿತು.

ದ್ವಜಾರೋಹಣವನ್ನು ಮದ್ದಡ್ಕ ಎಸ್ ಕೆ ಎಸ್ ಎಸ್ ಎಫ್ ಅಧ್ಯಕ್ಷ ಇಲಿಯಾಝ್ ಚಿಲಿಂಬಿ ನೆರವೇರಿಸಿದರು.ಕಾರ್ಯಕ್ರಮದಲ್ಲಿ ನೂರುಲ್ ಹುದಾ ಜಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಸಿರಾಜ್ ಚಿಲಿಂಬಿ ಸಂದೇಶ ಭಾಷಣ ಮಾಡಿದರು.

ಉಪಾಧ್ಯಕ್ಷರಾದ ಸ್ವಾಲಿಹ್ ಆಲಂದಿಲ ಅತಿಥಿ ಭಾಷಣ ಮಾಡಿದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನೂರುಲ್ ಹುದಾ ಜುಮಾ ಮಸೀದಿ ಮಾಜಿ ಅಧ್ಯಕ್ಷ ಅಹ್ಮದ್ ಇಬ್ರಾಹಿಮ್ ನೇರಳಕಟ್ಟೆ, ಕೋಶಾಧಿಕಾರಿ ರಿಯಾಝ್ ಸಬರಬೈಲು ಮತ್ತು ಶರೀಫ್ ಶಾಫಿ, ಇಸ್ಮಾಯಿಲ್ ಕಿಂಗ್ ಸ್ಟಾರ್, ಅಬ್ದುಲ್ಲಾ ಮುಂಡೂರು, ಸಾದಿಕ್ ದರ್ಖಾಸ್, ಇರ್ಶಾದ್ ಪಾದೆ, ಆಸಿಫ್ ಮದ್ದಡ್ಕ, ಮುನೀರ್ ನೇರಳಕಟ್ಟೆ, ರಿಝ್ವಾನ್ ಮದ್ದಡ್ಕ, ಹೈದರ್ ಮಠದಗುಡ್ಡೆ, ತೌಸೀಫ್ ಮದ್ದಡ್ಕ, ಇರ್ಶಾದ್ ಚಿಲಿಂಬಿ, ರಿಫಾಅತ್ ಚಿಲಿಂಬಿ, ರಾಫಿ ಚಿಲಿಂಬಿ, ಝಿಯಾ ನೇರಳಕಟ್ಟೆ, ರಶೀದ್ ಪಾದೆ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಎಸ್ ಕೆ ಎಸ್ಎಸ್ ಎಫ್ ಪ್ರಧಾನ ಕಾರ್ಯದರ್ಶಿ ನೌಶಾದ್ ಸಬರಬೈಲ್ ಸ್ವಾಗತಿಸಿ, ಮನ್ಸೂರ್ ಪಾದೆ ಧನ್ಯವಾದ ಮಾಡಿದರು.

LEAVE A REPLY

Please enter your comment!
Please enter your name here