ರಾಜ್ಯಮಟ್ಟದ ಪುರುಷರ ಹ್ಯಾಂಡ್ ಬಾಲ್ ಚಾಂಪಿಯನ್ಶಿಪ್- ಮಾದಪ್ಪ ಸ್ಮಾರಕ ಟ್ರೋಫಿ: ಇತಿಹಾಸದಲ್ಲಿ ಪ್ರಥಮ ಬಾರಿಗೆ ಚಾಂಪಿಯನ್ಶಿಪ್ ಪಟ್ಟ ಪಡೆದ ಎಸ್.ಡಿ.ಎಮ್ ಪುರುಷರ ತಂಡ

0

ಉಜಿರೆ: ರಾಜ್ಯಮಟ್ಟದ ಪುರುಷರ ಹ್ಯಾಂಡ್ ಬಾಲ್ ಚಾಂಪಿಯನ್ಶಿಪ್ ಮಾದಪ್ಪ ಸ್ಮಾರಕ ಟ್ರೋಫಿ ಪಂದ್ಯಾಟವು ಆ.10,11ರಂದು ಮೈಸೂರಿನ ಚಾಮುಂಡಿ ವಿಹಾರ್ ಸ್ಟೇಡಿಯಂನಲ್ಲಿ ನಡೆಯಿತು.

ಎಸ್ ಡಿ ಎಂ ಕಾಲೇಜಿನ 16 ವಿದ್ಯಾರ್ಥಿಗಳು ಭಾಗವಹಿಸಿ, ಚಾಂಪಿಯನ್ಶಿಪ್ ಪಟ್ಟವನ್ನು ಗಳಿಸಿದ್ದಾರೆ. ಫೈನಲ್ ನಲ್ಲಿ ಕರ್ನಾಟಕದ ಪೊಲೀಸ್ ತಂಡವನ್ನು 26/20 ಗೋಲು ಗಳೊಂದಿಗೆ ಮಣಿಸಿ, ಇತಿಹಾಸದ ಪ್ರಥಮ ಬಾರಿಗೆ ಚಾಂಪಿಯನ್ಶಿಪ್ ಪಟ್ಟವನು ಅಲಂಕರಿಸಿದೆ.

ಆದಿತ್ಯ ತಂಡದ ನಾಯಕನಾಗಿ, ನಿತಿನ್, ಮಯೂರ್ ಡಿ.ಆರ್ , ಸುಗನ್, ತರುಣ್ , ಗಗನ್ ಆರ್, ಮನೋಜ್, ರಾಹುಲ್, ದಿನೇಶ್, ಸಾತ್ವಿಕ್, ಚಿಂತನ್ , ಪುನೀತ್ ಕುಮಾರ್, ಸುರೇಶ್ ವಾರ್ತಿ, ರವಿಕುಮಾರ್, ಅಭಿಷೇಕ್ ಎಸ್ ಡಿ ಎಮ್ ತಂಡವನ್ನು ಪ್ರತಿನಿಧಿಸಿದ್ದಾರೆ.

ಇವರಿಗೆ ಸುದೀನ ಇವರು ತರಬೇತಿಯನ್ನು ನೀಡಿರುತ್ತಾರೆ.

LEAVE A REPLY

Please enter your comment!
Please enter your name here