ಗುರುವಾಯನಕೆರೆ: ವಿಶ್ವ ಸಂಸ್ಥೆ ಗುರುತಿಸಿದ ಆರು ಮಾರಕ ಖಾಯಿಲೆಗಳಲ್ಲಿ ಮಾದಕ ಚಟವು ಕೂಡ ಒಂದು, ಯಾವುದೇ ಚಟಗಳು ಮಿತಿ ಮೀರಿದಾಗ ಅದಕ್ಕೆ ಮನಸ್ಸು ಹೊಂದಿಕೊಳ್ಳುತ್ತದೆ ಇಡೀ ಪ್ರಪಂಚದಲ್ಲಿ ಒಂದನೆಯ ಸೈಲೆಂಟ್ ಕಿಲ್ಲರ್ ಧೂಮಪಾನ, ಎರಡನೆಯದ್ದು ಮದ್ಯಪಾನ ಹಾಗಾಗೀ ವಿದ್ಯಾರ್ಥಿಗಳು ಇಂಥಹ ಚಟಗಳಿಗೆ ಬಲಿಯಾಗಿ ತಮ್ಮ ಬವ್ಯ ಭವಿಷ್ಯ ವನ್ನೂ ಹಾಳು ಮಾಡಿಕೊಳ್ಳಬಾರದು, ಕಲಿಕೆಯ ಜೊತೆಗೆ ಜೀವನದ ಪಾಠದಲ್ಲಿ ಕೂಡ ಉತ್ತೀರ್ಣರಾಗಬೇಕು ಎಂದು ರಾಜ್ಯದಾದ್ಯಂತ ಶಾಲಾ ಕಾಲೇಜುಗಳಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನ ಆಯೋಜಿಸುವ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರು ಸಮಾಜದಲ್ಲಿ ದುಶ್ಚಟಗಳ ವಿರುದ್ದ ಜಾಗೃತಿ ಮೂಡಿಸುವ ಮೂಲಕ ಸ್ವಾಸ್ಥ್ಯ ಸಮಾಜವನ್ನು ನಿರ್ಮಾಣ ಮಾಡುತ್ತಿದ್ದಾರೆ ಎಂದು ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆಯ ರಾಜ್ಯ ಕಾರ್ಯದರ್ಶಿ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್ ರವರು ಹೇಳಿದರು.
ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಗುರುವಾಯನಕೆರೆ, ಅಖಿಲ ಕರ್ನಾಟಕ ಜನ ಜಾಗೃತಿ ಟ್ರಸ್ಟ್ ಧರ್ಮಸ್ಥಳ, ಎಕ್ಸೆಲ್ ಪದವಿ ಪೂರ್ವ ಕಾಲೇಜು, ವಿದ್ಯಾಸಾಗರ ಕ್ಯಾಂಪಸ್ ಗುರುವಾಯನಕೆರೆ, ಜನ ಜಾಗೃತಿ ವೇದಿಕೆ ಬೆಳ್ತಂಗಡಿ ತಾಲೂಕು ಇವುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ತಾಲೂಕ ಮಟ್ಟದ ಸ್ವಾಸ್ಥ್ಯ ಸಂಕಲ್ಪ ಸಪ್ತಾಹದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.ಮಕ್ಕಳನ್ನ ತಂದೆ ತಾಯಿ ಶಾಲೆಗೆ ಕಷ್ಟ ಪಟ್ಟು ಕಳುಹಿಸುತ್ತಾರೆ ಮಕ್ಕಳು ಶಾಲೆಯಲ್ಲಿ ಕಷ್ಟ ಪಟ್ಟು ಓದುವ ಬದಲು ಇಸ್ಟ ಪಟ್ಟು ಓದುವುದನ್ನು ರೂಡಿ ಮಾಡಿಕೊಳ್ಳಬೇಕು ಕೆಟ್ಟವರ ಸಹವಾಸದಿಂದ ಜೀವನ ನರಕವಾಗುತ್ತದೆ ಪ್ರಪಂಚ ಕಾಣುವ ಅದ್ಬುತ ವಿದ್ಯಾರ್ಥಿಗಳಾಗಬೇಕು ಮದ್ಯ ಸೇವನೆಗೆ ಅವಕಾಶ ಇದೆ ಆದರೆ ಬಿಡಿಸಲು ಅವಕಾಶ ಇಲ್ಲ ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಮದ್ಯಪಾನ ಮಜಾ ಅಲ್ಲ ಅದೊಂದು ಸಜಾ ಹಾಗು ಆಯುಷ್ಯ ಮುಗಿಯುವ ಮುನ್ನವೇ ಸಾವಿನ ಕಡೆಗೆ ಕೊಂಡೊಯ್ಯುವ ನಶೆ ಎಂದರು.
ಬದುಕಿನಲ್ಲಿ ಬದುಕುವ ದಾರಿಯನ್ನು ಕಂಡುಕೊಳ್ಳಬೇಕೇ ಹೊರತು ವಿನಾಶದ ದಾರಿಯನ್ನು ಅಲ್ಲ ಒಮ್ಮೆ ದುಶ್ಚಟಗಳಿಗೆ ಬಲಿಯಾದರೆ ಅದರಿಂದ ಹೊರಬರಲು ಸಾಧ್ಯವಿಲ್ಲ ಒಂದು ಚಟ ಇನ್ನೊಂದು ಚಟಕ್ಕೆ ದಾರಿ ಮಾಡಿಕೊಡುತ್ತದೆ ಕುಡಿತದ ಚಟ ಇದ್ದಲ್ಲಿ ಅದರ ಪರಿಣಾಮ ಇಡೀ ಕುಟುಂಬದ ಮೇಲೆ ಬೀಳುತ್ತದೆ ಜೀವನ ಎಂಬುದು ತುಂಬಾ ಸಣ್ಣದು ವಿದ್ಯಾರ್ಥಿ ದೆಸೆಯಲ್ಲಿಯೇ ಭವಿಷ್ಯದ ಬದುಕಿಗೇ ಅಡಿಪಾಯ ಹಾಕಬೇಕು ಎಂದು ಕರೆಕೊಟ್ಟರು.
ಎಕ್ಸೆಲ್ ಕಾಲೇಜಿನ ಪ್ರಾಂಶುಪಾಲ ಡಾ.ನವೀನ್ ಕುಮಾರ್ ಮರಿಕೆ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತ ಮನುಷ್ಯನನ್ನು ಹಾಳು ಮಾಡುವ ವ್ಯಸನಕ್ಕೆ ಬಲಿಯಾಗಬಾರದು ದುಶ್ಚಟಗಳು ಆರಂಭ ಆಗುವುದು ಸಹವಾಸ ದೋಷದಿಂದ ಬದುಕು ಹಾಳಾಗಬಾರದು ಎಂದರೆ ಇರುವ ಬದುಕನ್ನ ಗೌರವಯುತವಾಗಿ ಬದುಕಬೇಕು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರಿಗೆ ಇಂಥಹ ಕಾರ್ಯಕ್ರಮಗಳಿಂದ ಯಾವುದೇ ವೈಯಕ್ತಿಕ ಲಾಭಗಳಿಲ್ಲ ಆದರೆ ಅವರಿಗೆ ಸಮಾಜದ ಕಳಕಳಿ ಇದೆ ಎಂದು ಅಭಿನಂದನೆ ಸಲ್ಲಿಸಿದರು.
ವೇದಿಕೆಯಲ್ಲಿ ಕಾಲೇಜಿನ ಆಡಳಿತ ಅಧಿಕಾರಿ ಕೀರ್ತಿ ನಿಧಿ, ಜಿಲ್ಲಾ ಜನ ಜಾಗೃತಿ ವೇದಿಕೆಯ ಉಪಾಧ್ಯಕ್ಷೆ ಶಾರದಾ ರೈ, ತಾಲೂಕ ಜನ ಜಾಗೃತಿ ವೇದಿಕೆಯ ನಿಕಟಪೂರ್ವ ಅಧ್ಯಕ್ಷ ಕಿಶೋರ್ ಹೆಗ್ಡೆ, ತಾಲೂಕು ಯೋಜನಾಧಿಕಾರಿ ದಯಾನಂದ ಪೂಜಾರಿ ಉಪಸ್ಥಿತರಿದ್ದರು.
ವಲಯ ಮೇಲ್ವಿಚಾರಕಿ ಯಶೋದಾ, ಸೇವಾ ಪ್ರತಿನಿಧಿ ಫೆಲ್ಸಿಟ ಹಾಜರಿದ್ದರು.