ಮುಂಡತ್ತೋಡಿ: ಸ.ಹಿ.ಪ್ರಾ.ಶಾಲೆಯಲ್ಲಿ ಆಟಿಡೊಂಜಿ ದಿನ

0

ಉಜಿರೆ: ಮುಂಡತ್ತೋಡಿ ಸ.ಹಿ.ಪ್ರಾ.ಶಾಲೆಯಲ್ಲಿ ಆಟಿಡೊಂಜಿ ದಿನ ಆ.10ರಂದು ನಡೆಯಿತು.

ಕಾರ್ಯಕ್ರಮದಲ್ಲಿ ಶಾಲಾ ಎಸ್.ಡಿ.ಎಂ.ಸಿ ಅದ್ಯಕ್ಷೆ ರೇವತಿ, ಮುಖ್ಯ ಅತಿಥಿಗಳಾಗಿ ನಿವೃತ್ತ ಶಿಕ್ಷಕಿ ರಾಜೇಶ್ವರಿ, ಎಸ್.ಡಿ.ಎಂ.ಸಿ ಉಪಾಧ್ಯಕ್ಷ ದೇವರಾಜ್, ಮುಖ್ಯ ಶಿಕ್ಷಕಿ ಸೇವಂತಿ ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಸೇರಿಗೆ ಭತ್ತ ಹಾಕುವ ಮೂಲಕ ಚಾಲನೆ ನೀಡಲಾಯಿತು.ನಂತರ ದಿನದ ಮಹತ್ವ ತಿಳಿಸಲಾಯಿತು.

ಗುಲಾಬಿ ಪಾಡ್ದನ ಹೇಳಿದರು. ಕೈಲಾಶ್ ಶಾಲಾ ವಿದ್ಯಾರ್ಥಿ ಕಾರ್ಯಕ್ರಮ ನಿರೂಪಿಸಿದರು. ಹಲವಾರು ಬಗೆಯ ತಿನಿಸು ಮಾಡಿ ಎಲ್ಲಾ ಮಕ್ಕಳಿಗೆ ಪೋಷಕರು ಹಾಗೂ ಎಸ್.ಡಿ.ಎಂ.ಸಿ ಸದಸ್ಯರು ಬಡಿಸಿ ರುಚಿ ಸವಿದರು.

ಶಿಕ್ಷಕರು, ಅಡುಗೆ ಸಿಬ್ಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here