ಬೆಳ್ತಂಗಡಿ: ಪುತ್ತೂರು, ಸುಳ್ಯ, ಕಡಬ ತಾಲೂಕುಗಳನ್ನು ಒಳಗೊಂಡ ಪುತ್ತೂರು ಉಪ ವಿಭಾಗ ಮಟ್ಟದ ಜೀತ ಪದ್ಧತಿ ನಿರ್ಮೂಲನ ಸಮಿತಿಗೆ ಶೇಖರ ಲಾಯಿಲ ಇವರನ್ನು ನೇಮಕ ಮಾಡಲಾಗಿದೆ.
ಇವರು ಕಳೆದ 26 ವರ್ಷಗಳಿಂದ ಎಡಪಂಥೀಯ ಕಾರ್ಮಿಕ ಸಂಘಟನೆಗಳಲ್ಲಿ ಬೀಡಿ ಕಾರ್ಮಿಕ ಸಂಘ, ಅಕ್ಷರ ದಾಸೋಹ ನೌಕರರ ಸಂಘ, ಅಂಗನವಾಡಿ ನೌಕರರ ಸಂಘಟನೆ, ಆಟೋ ರಿಕ್ಷಾ ಚಾಲಕ-ಮಾಲೀಕರ ಸಂಘಟನೆಗಳ ಪದಾಧಿಕಾರಿಯಾಗಿ, ಭಾರತ ಪ್ರಜಾಸತ್ತಾತ್ಮಕ ಯುವಜನ ಸಂಘಟನೆ (ಡಿವೈಎಫ್ಐ) ನ ಜಿಲ್ಲಾ ಸಹ ಕಾರ್ಯದರ್ಶಿಯಾಗಿ, ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ದ.ಕ ಜಿಲ್ಲಾ ಸಹ ಸಂಚಾಲಕರಾಗಿ, ತಾಲೂಕು ಸಂಚಾಲಕರಾಗಿ, ದಲಿತ ಹಕ್ಕುಗಳ ಸಮಿತಿಯ ಅಧ್ಯಕ್ಷರಾಗಿ ಉತ್ಸಾಹಿ ಯುವಕ ಮಂಡಲದ ಅಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಯಾಗಿ ದುಡಿದಿದ್ದಾರೆ.
p>