ಬೆಳಾಲು: ಗೌಡರ ಯಾನೆ ಒಕ್ಕಲಿಗರ ಗ್ರಾಮ ಸಮಿತಿ ವತಿಯಿಂದ ಗೌಡ ಸಮಾಜದ ಕೌಟುಂಬಿಕ ಆಚರಣೆಗಳು, ಗ್ರಾಮ ಗೌಡರುಗಳೊಂದಿಗೆ ವಿಮರ್ಶೆ

0

ಬೆಳಾಲು: ಗೌಡ ಸಮಾಜದ ಕೌಟುಂಬಿಕ ಆಚರಣೆಗಳು, ಗ್ರಾಮ ಗೌಡರುಗಳೊಂದಿಗೆ ವಿಮರ್ಶೆ ಕಾರ್ಯಕ್ರಮವು ಗೌಡರ ಯಾನೆ ಒಕ್ಕಲಿಗರ ಗ್ರಾಮ ಸಮಿತಿ, ಯುವ ವೇದಿಕೆ ಹಾಗೂ ಮಹಿಳಾ ವೇದಿಕೆ ವತಿಯಿಂದ ಜು.28ರಂದು ಬೆಳಾಲಿನ ಕೃಷಿ ಪತ್ತಿನ ಸಹಕಾರಿ ಸೇವಾ ಸಂಘದ ಸಭಾಂಗಣದಲ್ಲಿ ನಡೆಯಿತು.

ಬೆಳಾಲು ಗ್ರಾಮ ಸಮಿತಿಯ ಅಧ್ಯಕ್ಷ ವಿಜಯ ಗೌಡ ಸೌತೆಗದ್ದೆ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದರು. ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಗೌರವಾಧ್ಯಕ್ಷ ಪದ್ಮ ಗೌಡ ಎಚ್., ಕೋಶಾಧಿಕಾರಿ ಕೃಷ್ಣಪ್ಪ ಗೌಡ ಸವಣಾಲು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ತಾಲೂಕು ಸಂಘದ ನಿರ್ದೇಶಕಿ ಉಷಾದೇವಿ ಕಿನ್ಯಾಜೆ, ಯುವ ವೇದಿಕೆಯ ಕಾರ್ಯದರ್ಶಿ ಸುರೇಶ್ ಗೌಡ ಕೌಡಂಗೆ, ಬೆಳಾಲು ಗ್ರಾಮ ಸಮಿತಿಯ ಗೌರವಾಧ್ಯಕ್ಷ ಸುರೇಂದ್ರ ಗೌಡ ಸುರುಳಿ, ಯುವ ವೇದಿಕೆ ಗೌರವಾಧ್ಯಕ್ಷ ಮಹೇಶ್ ಗೌಡ ಪುಳಿತ್ತಡಿ, ಯುವ ವೇದಿಕೆ ಅಧ್ಯಕ್ಷ ಉಮೇಶ್ ಗೌಡ ಜಿ. ಎಂ, ಮಹಿಳಾ ವೇದಿಕೆ ಅಧ್ಯಕ್ಷೆ ಕನ್ನಿಕಾ ಪದ್ಮ ಗೌಡ ವೇದಿಕೆಯಲ್ಲಿ ಅತಿಥಿಗಳಾಗಿದ್ದರು.

ಈ ಸಂದರ್ಭದಲ್ಲಿ ಬೆಳಾಲು ಗ್ರಾಮದ ಎಲ್ಲಾ ಬೈಲಿನ ಗೌಡರುಗಳು, ಒತ್ತು ಗೌಡರುಗಳು ಹಾಗೂ ಗೌಡ ಸಮಾಜದ ಹಿರಿಯರು ಕೌಟುಂಬಿಕ ಆಚರಣೆಗಳ ಬಗ್ಗೆ ವಿಮರ್ಶೆ ನಡೆಸಿ ಕೆಲವು ಕ್ರೂರ ಮೂಢನಂಬಿಕೆಗಳನ್ನು ಕೈಬಿಟ್ಟು ಆಧುನಿಕತೆಯ ಕಡೆಗೆ ಗಮನ ಕೊಟ್ಟು ನಿರ್ಧಾರಗಳನ್ನು ತೆಗೆದುಕೊಂಡರು.

ತಾಲೂಕಿನ ಮಹಿಳಾ ಕಾರ್ಯದರ್ಶಿ ಲೀಲಾ ವೀರಣ್ಣ ಗೌಡ ಬೆಳಾಲು, ಗ್ರಾಮ ಸಮಿತಿಯ ಉಪಾಧ್ಯಕ್ಷರುಗಳು, ಸದಸ್ಯರು, ಯುವ ವೇದಿಕೆಯ ಕಾರ್ಯದರ್ಶಿ ಸಂಜೀವ ಗೌಡ ಕಾಡಂಡ, ಉಪಾಧ್ಯಕ್ಷರುಗಳು, ಸದಸ್ಯರುಗಳು, ಮಹಿಳಾ ವೇದಿಕೆಯ ಕಾರ್ಯದರ್ಶಿ ಲತಾ ಕೇಶವ ಗೌಡ ಹಾಗೂ ಉಪಾಧ್ಯಕ್ಷರುಗಳು, ಸದಸ್ಯರುಗಳು ಹಾಗೂ ಊರಿನ ಹಿರಿಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಮಹೇಶ್ ಗೌಡ ಪುಳಿತ್ತಡಿ ಸ್ವಾಗತಿಸಿದರು.ಗ್ರಾಮ ಸಮಿತಿಯ ಕಾರ್ಯದರ್ಶಿ ಧರ್ಮೇಂದ್ರ ಗೌಡ ಪುಚ್ಚೆಹಿತ್ತಿಲು ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here