ಕೊಕ್ಕಡ: ಕೌಕ್ರಾಡಿ ಸಂತ ಜೋನರ ದೇವಾಲಯದಲ್ಲಿ ಜುಲೈ 28ರಂದು ಪವಿತ್ರ ಬಲಿಪೂಜೆ ಅರ್ಪಿಸುವುದರೊಂದಿಗೆ ಚರ್ಚ್ ನ ಹಿರಿಯ ನಾಗರಿಕರ ದಿನದ ಆಚರಣೆಯನ್ನು ನಡೆಸಲಾಯಿತು.
ಕಥೋಲಿಕ್ ಸಭಾ ಮಂಗ್ಳುರ್ ಪ್ರದೇಶ್ ಕೊಕ್ಕಡ ಘಟಕ ಇದರ ಮುಂದಾಳುತ್ವದಲ್ಲಿ ಹಿರಿಯ ನಾಗರಿಕರ ದಿನದ ಆಚರಣೆಯನ್ನು ಚರ್ಚ್ ಸಭಾಭವನದಲ್ಲಿ ಆಯೋಜಿಸಲಾಯಿತು. ಪ್ರಾರ್ಥನಾ ವಿಧಿಯನ್ನು ವಂದನೀಯ ಫಾ.ಅಶೋಕ್ ಡಿಸೋಜ SVD ಅವರು ನಡೆಸಿಕೊಟ್ಟರು.
ವೇದಿಕೆಯಲ್ಲಿರುವ ಗಣ್ಯರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಹಿರಿಯ ನಾಗರಿಕರಾದ ಮರಿಯಮ್ಮ ಚಾಕೊ ಹಾಗೂ ಜಾನ್ ಕುವೆಲ್ಲೊರವರು ಸಂಧರ್ಭೋಚಿತವಾಗಿ ಮಾತನಾಡಿದರು.
ದೇವಾಲಯದ ಧರ್ಮಗುರುಗಳಾಗಿರುವ ವಂದನೀಯ ಫಾ.ಅನಿಲ್ ಪ್ರಕಾಶ್ ಡಿಸಿಲ್ವಾರವರು ತಮ್ಮ ಸಂದೇಶವನ್ನು ನೀಡಿದರು. ಹಿರಿಯರಿಗೆ ಕಾಣಿಕೆ ನೀಡಿ ಗೌರವಿಸಲಾಯಿತು. ಬಬಿತಾರವರು ಮನೋರಂಜನಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಕಥೋಲಿಕ್ ಸಭಾ ಅಧ್ಯಕ್ಷೆ ಸರಿತಾ ಸ್ಟ್ರೆಲ್ಲಾ ಸ್ವಾಗತಿಸಿದರು, ಕಾರ್ಯದರ್ಶಿ ಮೆಲ್ವಿನ್ ಡಿಸೋಜ ಧನ್ಯವಾದವಿತ್ತರು, ಸೆವ್ರಿನ್ ಡಿಸೋಜರವರು ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದಲ್ಲಿ ಚರ್ಚ್‌ನ ಧರ್ಮಗುರುಗಳು ವಂದನೀಯ ಫಾ.ಅನಿಲ್ ಪ್ರಕಾಶ್ ಡಿಸಿಲ್ವಾರವರು, ವಂದನೀಯ ಫಾ.ಅಶೋಕ್ ಡಿಸೋಜ SVD, ಬ್ರ.ಲೂಕಸ್ ಪಿಂಟೊ, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷರು ಪ್ರವೀಣ್ ನೋಯೆಲ್ ಮೊಂತೇರೊ, ಕಾರ್ಯದರ್ಶಿ ವೀಣಾ ಮಸ್ಕರೇನ್ಹಸ್, ಆಯೋಗಗಳ ಸಂಚಾಲಕಿ ವಿನ್ನಿಫ್ರೆಡ್ ಡಿಸೋಜ, ಕಥೋಲಿಕ್ ಸಭಾ ಸದಸ್ಯರು ಹಾಗೂ ಚರ್ಚ್ ಬಾಂಧವರು ಉಪಸ್ಥಿತರಿದ್ದರು.ಭೋಜನದೊಂದಿಗೆ ಕಾರ್ಯಕ್ರಮವು ಕೊನೆಗೊಂಡಿತು.