

ದೋಣಿಗಲ್: ಬೆಂಗಳೂರು ಮಂಗಳೂರು ಮುಖ್ಯ ಸಂಪರ್ಕ ಘಾಟ್ ಆದ ಶಿರಾಡಿ ಘಾಟ್ ನ ದೋಣಿಗಲ್ ಸಮೀಪ ಗುಡ್ಡ ಕುಸಿತವಾಗಿ,ಮಣ್ಣು ರಸ್ತೆಗೆ ಬಿದ್ದಿದೆ.ದೊಡ್ಡ ತಪಲೆ ಎಂಬಲ್ಲಿ ಮಣ್ಣು ಬಿದ್ದಿದ್ದು ರಾಷ್ಟ್ರೀಯ ಹೆದ್ದಾರಿ ಇಲಾಖೆಯವರು ತೆರವು ಕಾರ್ಯಾರಂಭಿಸಿದ್ದಾರೆ.ಇದರಿಂದಾಗಿ ವಾಹನ ಸಂಚಾರಕ್ಕೆ ಅಡಚಣೆಯುಂಟಾಗಿದ್ದು ವಾಹನಗಳು ಸಾಲುಗಟ್ಟಿ ನಿಂತಿವೆ.ರಸ್ತೆಗೆ ಬಿದ್ದ ಮಣ್ಣನ್ನು ತೆರವುಗೊಳಿಸಲಾಗುತ್ತಿದ್ದು ಮುಂದಿನ ಒಂದು ಗಂಟೆಯೊಳಗೆ ಸಂಚಾರಕ್ಕೆ ಮುಕ್ತವಾಗುವುದಾಗಿ ರಾ.ಹೆ.ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.