ಪೆರಿಂಜೆ: ಶ್ರೀ.ಧ.ಮ.ಅ ಪ್ರೌಢ ಶಾಲೆಯಲ್ಲಿ 25ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ದಿನಾಚರಣೆ- ಯೋಧ ನಮನ ಕಾರ್ಯಕ್ರಮ

0

ಪೆರಿಂಜೆ: ಧರ್ಮಸ್ಥಳ ಅನುದಾನಿತ ಪ್ರೌಢಶಾಲೆಯಲ್ಲಿ ಕಾರ್ಗಿಲ್ ವಿಜಯೋತ್ಸವ ದಿನಾಚರಣೆ ಅಂಗವಾಗಿ “ಯೋಧ ನಮನ” ಕಾರ್ಯಕ್ರಮ ಹಾಗೂ ‘ಗೊಂಚಲು’ ಭಿತ್ತಿಪತ್ರಿಕೆ ಅನಾವರಣ ಕಾರ್ಯಕ್ರಮ ಶ್ರೀ.ಧ.ಮ.ಅನುದಾನಿತ ಪ್ರೌಢ ಶಾಲೆಯಲ್ಲಿ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ವೀರಯೋಧರಿಗೆ ಗೌರವ ನಮನ ಸಲ್ಲಿಸುವ “ಯೋಧ ನಮನ” ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಹುತಾತ್ಮ ಸೈನಿಕರಿಗೆ ಹಣತೆ ದೀಪ ಹಚ್ಚಿ ಪುಷ್ಪಾರ್ಚನೆ ಮೂಲಕ ಯೋಧರ ಬಲಿದಾನವನ್ನು ಸ್ಮರಿಸಿ ಗೌರವನಮನ ಸಲ್ಲಿಸಲಾಯಿತು.

ವಿದ್ಯಾರ್ಥಿಗಳು ದೇಶಭಕ್ತಿ ಬಿಂಬಿಸುವ ಭಾಷಣ, ಹಾಡು, ನೃತ್ಯ ಹಾಗು ಕಾರ್ಗಿಲ್ ಯುದ್ಧವನ್ನು ಸ್ಮರಿಸುವ ಕಿರು ಪ್ರಹಸನ ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರಾದ ಸುಧೀರ್ ಅಧ್ಯಕ್ಷತೆವಹಿಸಿ ಯೋಧರ ತ್ಯಾಗ ಬಲಿದಾನಗಳ ಕುರಿತು ಮಾತನಾಡಿದರು.

ಶಿಕ್ಷಕಿ ಜಯಂತಿ ಕಾರ್ಯಕ್ರಮವನ್ನು ಆಯೋಜಿಸಿ ಕಾರ್ಗಿಲ್ ದಿನಾಚರಣೆಯ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಬಳಿಕ ಕನ್ನಡ ಸಂಘದ ವತಿಯಿಂದ ‘ಗೊಂಚಲು’ ಭಿತ್ತಿಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು. ಅಧ್ಯಾಪಕ ವೃಂದದವರು ಹಾಗು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿ ನಾಯಕ ಸಂಬ್ರಾನ್ ಸ್ವಾಗತಿಸಿ ವಿದ್ಯಾರ್ಥಿನಿ ಸೌಮ್ಯ ಧನ್ಯವಾದವಿತ್ತರು. ಸಾಂಸ್ಕೃತಿಕ ಮಂತ್ರಿ ಪ್ರತೀಕ್ಷಾ ಕಾರ್ಯಕ್ರಮ ನಿರ್ವಹಿಸಿದರು.

p>

LEAVE A REPLY

Please enter your comment!
Please enter your name here