ಬೆಳ್ತಂಗಡಿ: ಜೆಸಿಐ ಮಂಜುಶ್ರೀಯಲ್ಲಿ ಲೇಡಿ ಜೇಸಿ ಜೆಜೆಸಿ ಸಮ್ಮೇಳನದಲ್ಲಿ ಪ್ರಶಸ್ತಿ ಅಂಗವಾಗಿ ಅಭಿನಂದನಾ ಕಾರ್ಯಕ್ರಮ

0

ಬೆಳ್ತಂಗಡಿ: ಬೈಂದೂರಿನಲ್ಲಿ ನಡೆದ ಜೆಸಿಐ ಭಾರತದ ವಲಯ 15ರ ಜೂನಿಯರ್ ಜೆಸಿ ಹಾಗೂ ಲೇಡಿ ಜೇಸಿ ಸಮ್ಮೇಳನದಲ್ಲಿ ಬೆಳ್ತಂಗಡಿ ಜೆಸಿಯ ಜೂನಿಯರ್ ಜೆಸಿ ವಿಭಾಗಕ್ಕೆ ವಲಯದ ಅತ್ಯುತ್ತಮ ಜೆಜೆಸಿ ವಿಭಾಗ ಹಾಗೂ ಲೇಡಿ ಜೆಸಿ ವಿಭಾಗಕ್ಕೆ ಅತ್ಯುತ್ತಮ ರನ್ನರ್ ಪ್ರಶಸ್ತಿ ಹಾಗೂ ಸ್ಪರ್ಧಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.ಆ ಪ್ರಯುಕ್ತ ನಡೆದ ಅಭಿನಂದನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷ JFM ರಂಜಿತ್ ಎಚ್.ಡಿ. ವಹಿಸಿ ಸ್ವಾಗತಿಸಿದರು.

ಈ ವರ್ಷದಲ್ಲಿನಡೆದ ಎಲ್ಲಾ ಕಾರ್ಯಕ್ರಮಗಳಿಗೆ ಮಾರ್ಗದರ್ಶನವನ್ನು ಮಾಡಿದ ನಿಕಟ ಪೂರ್ವ ಅಧ್ಯಕ್ಷರಿಗೆ, ಪೂರ್ವಾಧ್ಯಕ್ಷರುಗಳಿಗೆ ಹಾಗೂ ಸಹಕಾರವನ್ನು ನೀಡಿದ ಎಲ್ಲಾ ಪದಾಧಿಕಾರಿಗಳಿಗೆ ಮತ್ತು ಸದಸ್ಯರುಗಳಿಗೆ ಧನ್ಯವಾದವನ್ನು ಸಲ್ಲಿಸಿದರು.

ಬೆಳ್ತಂಗಡಿ ಲಯನ್ಸ್ ಕ್ಲಬ್ ನ ನೂತನ ಕಾರ್ಯದರ್ಶಿ ಜೆಸಿಐ ಬೆಳ್ತಂಗಡಿ ಘಟಕದ ಪೂರ್ವ ಅಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿ ಹಾಗೂ ಕಾರ್ಯಕ್ರಮದ ಪ್ರಾಯೋಜಕತ್ವವನ್ನು ವಹಿಸಿದ ಪೂರ್ವ ಅಧ್ಯಕ್ಷ ಸ್ವರೂಪ್ ಶೇಖರ್ ಇವರುಗಳನ್ನು ಅಭಿನಂದಿಸಲಾಯಿತು.ಈ ಕಾರ್ಯಕ್ರಮದಲ್ಲಿ ಹೊಸ ಜೆಸಿ ಸದಸ್ಯರಾಗಿ ಪೂರ್ವ ಅಧ್ಯಕ್ಷ ಶ್ರೀನಾಥ್ ರವರ ಮಕ್ಕಳಾದ ಆಧ್ಯಾತ್ಮಿ ಕೆ.ಎಸ್, ಹಾಗೂ ಜೆಜೆಸಿ ಸದಸ್ಯರಾಗಿ ಅದ್ವಿತಿ ಯವರು ಸೇರ್ಪಡೆಗೊಂಡರು. ಇವರಿಗೆ ವಲಯ ಉಪಾಧ್ಯಕ್ಷ ಶಂಕರ್ ರಾವ್ ರವರು ಪ್ರತಿಜ್ಞಾವಿಧಿ ಬೋಧಿಸಿದರು.

ಕಾರ್ಯಕ್ರಮದಲ್ಲಿ ಪೂರ್ವ ಅಧ್ಯಕ್ಷರುಗಳಾದ ಅಶೋಕ ಕುಮಾರ್ ಬಿ ಪಿ, ನಾರಾಯಣ ಶೆಟ್ಟಿ, ಶ್ರೀನಾಥ್ ಕೆ ಮ್,ಚಿದಾನಂದ ಇಡ್ಯಾ, ಪ್ರಶಾಂತ್ ಲಾಯಿಲ, ಪ್ರಸಾದ್ ಬಿ ಎಸ್, ಉಪಾಧ್ಯಕ್ಷರುಗಳಾದ ಪ್ರೀತಮ್ ಶೆಟ್ಟಿ, ಆಶಾ ಪ್ರಶಾಂತ್, ಸುದೀರ್ ಕೆಎನ್, ಶೈಲೇಶ್, ಲೇಡಿ ಜೆಸಿ ಸಂಯೋಜಕಿ ಶ್ರುತಿ ರಂಜಿತ್, ಕೋಶಾಧಿಕಾರಿ ಮಮಿತಾ ಸುಧೀರ್, ಕಾರ್ಯಕ್ರಮದ ಸಂಯೋಜಕರಾದ ಪ್ರಮೋದ್, ಪದಾಧಿಕಾರಿಗಳಾದ ಮಧುರಾ ರಾಘವ್, ರಜತ್, ಜಯರಾಜ್ ನಡಕರ, ರತ್ನಾಕರ ಬಳಂಜ, ವಿನಾಯಕ್, ಜೆಜೆಸಿ ಅಧ್ಯಕ್ಷರಾದ ಸಮನ್ವಿತ್ ಕುಮಾರ್, ಜೂನಿಯರ್ ಜೆಸಿ ಸಮ್ಮೇಳನದ ಸಂಯೋಜಕರಾದ ದೀಪ್ತಿ ಕುಲಾಲ್, ತೇಜಸ್, ಅತಿಶ್ರೇಯಾ, ಸೃಜನ್, ನಯನ, ಉದಿತ್ ರವರು ಭಾಗವಹಿಸಿದರು.

ವೇದಿಕೆ ಆಹ್ವಾನವನ್ನು ಜೊತೆ ಕಾರ್ಯದರ್ಶಿ ರಾಮಕೃಷ್ಣ ನಡೆಸಿದರು, ಜೆಸಿ ವಾಣಿಯನ್ನು ಜೆಜೆಸಿ ತ್ರಿಷಾ ಉದ್ಘೋಷಿಸಿದರು.ಕಾರ್ಯದರ್ಶಿಗಳಾದ ಅನುದೀಪ್ ಜೈನ್ ವಂದಿಸಿದರು.

LEAVE A REPLY

Please enter your comment!
Please enter your name here