ಬೆಳ್ತಂಗಡಿ: ತಾಲೂಕಿನಲ್ಲಿ ಎಪಿ ಉಸ್ತಾದರನ್ನು ಖಾಝಿಯಾಗಿ ಸ್ವೀಕಾರ ಮಾಡುವ ಬಗ್ಗೆ ಪೂರ್ವ ಸಿದ್ಧತಾ ಸಭೆ ಗುರುವಾಯನಕೆರೆಯಲ್ಲಿ ಬೆಳ್ತಂಗಡಿ ತಾಲೂಕು ಸಂಯುಕ್ತ ಜಮಾತಿನ ಅಧ್ಯಕ್ಷ ಸೆಯ್ಯೆದ್ ಇಸ್ಮಾಯಿಲ್ ತಂಙಳ್ ರವರ ಅಧ್ಯಕ್ಷತೆಯಲ್ಲಿ ಜು.25ರಂದು ಗುರುವಾಯನಕೆರೆ ಮಸೀದಿ ಸಭಾಂಗಣದಲ್ಲಿ ಜರಗಿತು.
ಕಾರ್ಯಕ್ರಮದಲ್ಲಿ ಉದ್ಘಾಟನಾ ಭಾಷಣ ಮಾಡಿದ ಬೆಳ್ತಂಗಡಿ ತಾಲೂಕು ಸಂಯುಕ್ತ ಸಹಾಯಕ ಖಾಝಿ ಸೆಯ್ಯೆದ್ ಅಬ್ದುರ್ರಹ್ಮಾನ್ ಸಾದಾತ್ ತಂಙಳ್ ರವರು ನಮ್ಮ ತಾಲೂಕಿನಲ್ಲಿ ಖಾಝಿಯಾಗಿದ್ದ ಸೆಯ್ಯದ್ ಖುರ್ರತ್ತುಸ್ಸಾದಾತ್ ಫಝಲ್ ಕೋಯಮ್ಮ ತಂಙಳ್ ರವರು ಇತ್ತೀಚೆಗೆ ನಮ್ಮನ್ನಗಲಿದ್ದು. ಆ ಸ್ಥಾನಕ್ಕೆ ಸುನ್ನೀ ಕುಟುಂಬದ ಅಗ್ರಗಣ್ಯ ನೇತಾರರಾದ ಇಂಡಿಯನ್ ಮುಫ್ತಿ ಸುಲ್ತಾನುಲ್ ಉಲಮಾ ಎ ಪಿ ಉಸ್ತಾದರನ್ನು ಖಾಝಿಯಾಗಿ ನೇಮಕ ಮಾಡುವುದು ಅನಿವಾರ್ಯವಾಗಿದೆ ಇದಕ್ಕೆಲ್ಲ ತಾಲೂಕಿನ ಸುನ್ನೀ ಮೊಹಲ್ಲಾದ ನೇತಾರರಾದ ನಿಮ್ಮಲ್ಲರ ಅನುಮತಿ ಹಾಗೂ ಸಹಕಾರ ಬೇಕು ಎಂದರು.
ಅಧ್ಯಕ್ಷ ಭಾಷಣ ಮಾಡಿದ ಸೈಯ್ಯದ್ ಇಸ್ಮಾಯಿಲ್ ತಂಙಳ್ ರವರು ನಮ್ಮನ್ನಗಲಿದ ಸೆಯ್ಯದ್ ಖುರ್ರತ್ತುಸ್ಸಾದಾತ್ ಫಝಲ್ ಕೋಯಮ್ಮ ತಂಙಳ್ ರವರ ಮಹತ್ವವನ್ನು ವಿವರಿಸಿದರು. ವೇದಿಕೆಯಲ್ಲಿ ಸಮಿತಿಯ ಕಾರ್ಯಾಧ್ಯಕ್ಷ ಅಶ್ರಫ್ ಸಖಾಫಿ ಮೂಡಡ್ಕ, ಕಾಜೂರು ಜಮಾಅತ್ ಅಧ್ಯಕ್ಷ ಇಬ್ರಾಹಿಂ, ಉಜಿರೆ ಜಮಾಅತ್ ಅಧ್ಯಕ್ಷ ಹಮೀದ್ ಹಾಜಿ, ಗುರುವಾಯನಕೆರೆ ಜಮಾಅತ್ ಅಧ್ಯಕ್ಷ ಲತೀಫ್ ಹಾಜಿ, ಸಂಯುಕ್ತ ಜಮಾಅತ್ ನೇತಾರರಾದ ಬದ್ರುದ್ದೀನ್ ಪರಪ್ಪು ಕಾಸಿಂ ಪದ್ಮುಂಜ, ಅಬ್ದುಲ್ ಖಾದರ್ ಹಾಜಿ ಉಜ್ರಿಬೊಟ್ಟು, ಅಬ್ಬಾಸ್ ಬಟ್ಲಡ್ಕ, ಹಂಝ ಮದನಿ ಉಸ್ತಾದ್, ಮುಹಮ್ಮದ್ ರಫೀ ಬೆಳ್ತಂಗಡಿ, ವಝೀರ್ ಬಂಗಾಡಿ, ಶರೀಫ್ ಸಖಾಫಿ ನೆಕ್ಕಿಲು, ಇಖ್ಬಾಲ್ ಮಾಚಾರು, ತಾಹಿರ್ ಸಖಾಫಿ, ಅಹ್ಮದ್ ಗೇರುಕಟ್ಟೆ ಉಪಸ್ಥಿತರಿದ್ದರು.
ಸೇರಿದಂತೆ ವಿವಿಧ ಜಮಾತಿನ ಮೊಹಲ್ಲಾ ನೇತಾರರು ಉಪಸ್ಥಿತರಿದ್ದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಝಾಕ್ ಸಖಾಫಿ ಮೊಡಂತಿಯಾರ್ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ಧನ್ಯವಾದ ಸಲ್ಲಿಸಿದರು.