


ಕಾಶಿಪಟ್ಣ: ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.ಅಧ್ಯಕ್ಷರಾಗಿ ಶೈಲೇಶ್ ಕೆ ಎಸ್ ಮೇಗಿನ ಬರೆಂಜ, ಉಪಾಧ್ಯಕ್ಷರಾಗಿ ಅಮರನಾಥ ಪೂಜಾರಿ ಹಿಮರಡ್ಡ ಮತ್ತು ಶ್ರೀ ಮನೋಜ್ ಕೆ ರಾಮರತ್ನ, ಪ್ರಧಾನ ಕಾರ್ಯದರ್ಶಿಯಾಗಿ ಹರೀಶ್ ಕೆ ಸಾಲ್ಯಾನ್ ಕಾಶಿಪಟ್ಣ, ಜೊತೆ ಕಾರ್ಯದರ್ಶಿಯಾಗಿ ಕಾರ್ತಿಕ್ ಶಿವಗಿರಿ ನಗರ, ಕೋಶಾಧಿಕಾರಿಯಾಗಿ ಸುದೀಪ್ ಗುರುಪ್ರಭಾ ಇವರುಗಳು ಸರ್ವಾನುಮತಗಳಿಂದ ಆಯ್ಕೆಯಾದರು.


ವೇದಿಕೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಉಮೇಶ್ ಶೆಟ್ಟಿ ಪರಪ್ಪು,ಗೌರವ ಸಲಹೆಗಾರರಾದ ಅಶೋಕ್ ಕೋಟ್ಯಾನ್ ಪಡ್ಯೋಡಿ, ಸ್ಥಾಪಕಾಧ್ಯಕ್ಷರಾದ ನಾಗೇಶ್ ಸಾಲ್ಯಾನ್ ಮೂಲ್ಡೊಟ್ಟು, ಗೌರವಾಧ್ಯಕ್ಷರಾದ ಹರೀಶ್ ಪಿ ಕೋಟ್ಯಾನ್ ಪಣಿಲಾಜೆ, ನಿಕಟಪೂರ್ವ ಪ್ರಧಾನ ಕಾರ್ಯದರ್ಶಿಯಾದ ಹರಿಕಾಂತ್ ಎಸ್ ಸೃಷ್ಟಿ ನಿವಾಸ ಇವರುಗಳು ಉಪಸ್ಥಿತರಿದ್ದರು ಹಾಗೂ ಸಭೆಯಲ್ಲಿ ಸಮಿತಿಯ ಸದಸ್ಯರುಗಳು ಹಾಜರಿದ್ದರು.
ನೂತನ ಅಧ್ಯಕ್ಷ ಶೈಲೇಶ್ ಕೋಟ್ಯಾನ್ ರವರು ತಮ್ಮ ಅನಿಸಿಕೆಯನ್ನು ವ್ಯಕ್ತ ಪಡಿಸಿದರು ಹಾಗೂ ನಿಕಟ ಪೂರ್ವ ಅಧ್ಯಕ್ಷರಾದ ಉಮೇಶ್ ಶೆಟ್ಟಿ ಯವರು ಅಧ್ಯಕ್ಷೀಯ ನುಡಿಗಳನ್ನಾಡಿದರು. ನಿಕಟ ಪೂರ್ವ ಕಾರ್ಯದರ್ಶಿ ಹರಿಕಾಂತ್ ಎಸ್ ಸ್ವಾಗತಿಸಿ ನೂತನ ಕಾರ್ಯದರ್ಶಿ ಹರೀಶ್ ಕೆ ಸಾಲ್ಯಾನ್ ರವರು ಕಾರ್ಯಕ್ರಮ ನಿರೂಪಿಸಿ ಕೊನೆಗೆ ಎಲ್ಲರಿಗೂ ಧನ್ಯವಾದವಿತ್ತರು.


 
            
