


ಉಜಿರೆ : ಭಾರತದಲ್ಲಿ ಅನಾದಿಕಾಲದಿಂದಲೂ ಗುರುಶಿಷ್ಯ ಪರಂಪರೆ ನಡೆದು ಬಂದಿದೆ. ಈ ಪರಂಪರೆಯಿಂದಲೇ ನಮ್ಮ ರಾಷ್ಟ್ರವು ಇಂದಿಗೂ ವೈಭವಸಂಪನ್ನವಾಗಿದೆ. ಪರಂಪರೆಯು ಸಮಾಜಕ್ಕೆ ಅಧ್ಯಾತ್ಮದ ಜ್ಞಾನವನ್ನು ನೀಡುವುದರೊಂದಿಗೆ ಸುಸಂಸ್ಕೃತ ಆಚರಣೆಗಳನ್ನೂ ಕಲಿಸಿದೆ. ನಮ್ಮ ಆಚಾರ, ವಿಚಾರ, ಉಡುಪು, ವರ್ತನೆ ಇವೆಲ್ಲವೂ ಸುಸಂಸ್ಕೃತವಾಗಿರಲು ನಾವು ಪ್ರಯತ್ನಿಸಬೇಕಿದೆ ಎಂದು ಸನಾತನ ಸಂಸ್ಥೆಯ ಮಂಜುಳ ಗೌಡ ಹೇಳಿದರು.
ಅವರು ಉಜಿರೆಯ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಶ್ರೀ ಕೃಷ್ಣಾನುಗ್ರಹ ಸಭಾ ಭವನದಲ್ಲಿ ಜು. 21 ರಂದು ನಡೆದ ಗುರುಪೂರ್ಣಿಮಾ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಿಲ್ಲೆಯ ಮಂಗಳೂರು, ಬಂಟ್ವಾಳದಲ್ಲಿ ಮತ್ತು ದೇಶದಾದ್ಯಂತ 71 ಸ್ಥಳಗಳಲ್ಲಿ ಹಿಂದೂ ಜನಜಾಗೃತಿ ಸಮಿತಿಯು ಗುರುಪೂರ್ಣಿಮಾ ಮಹೋತ್ಸವವನ್ನು ಆಯೋಜಿಸಿತ್ತು. ಬೆಳಿಗ್ಗೆ ಶ್ರೀ ವ್ಯಾಸ ಪೂಜೆ ಮತ್ತು ಪರಮಪೂಜ್ಯ ಭಕ್ತರಾಜ ಮಹಾರಾಜರ ಪ್ರತಿಮಾ ಪೂಜೆ ನೆರವೇರಿಸಲಾಯಿತು.


ಗುರುಗಳ ಮಾರ್ಗದರ್ಶನದಿಂದ ಆದರ್ಶ ಸಮಾಜ ನಿರ್ಮಿಸಲು ಸಾಧ್ಯ – ನ್ಯಾಯವಾದಿ ಈಶ್ವರ ಕೊಟ್ಟಾರಿಭಾರತ ಭೂಮಿಯಲ್ಲಿ ಜನ್ಮ ಪಡೆಯಬೇಕಾದರೆ ಪುಣ್ಯ ಮಾಡಿರಬೇಕು. ಹಿಂದೆ ಹೇಗೆ ನಮ್ಮ ದೇಶ ರಾಮ ರಾಜ್ಯವಾಗಿತ್ತು ಆ ಸಮಯದಲ್ಲಿ ಎಲ್ಲಾ ಜನರು ಸುಖಿಗಳಾಗಿದ್ದರು. ನಮ್ಮ ದೇಶ ಈಗ ಭ್ರಷ್ಟಾಚಾರ, ಅನೈತಿಕತೆ, ಮೀಸಲಾತಿ, ಚಳುವಳಿ ಇತ್ಯಾದಿಗಳಿಂದ ಜೀವನ ಕಷ್ಟಕರವಾಗಿದೆ ಎಂದರು.ಆದರೆ ಇವೆಲ್ಲವುಗಳಿಗೆ ನಾವು ವಿರೋಧಿಸದೆ ಹೊಂದಿಕೊಂಡಿದ್ದೇವೆ.
ಇವೆಲ್ಲವುಗಳಿಗೆ ಒಂದೇ ಪರಿಹಾರ, ನಾವೆಲ್ಲರೂ ಆದ್ಯಾತ್ಮಿಕ ಸಾಧನೆ ಮಾಡಿ ಇದನ್ನು ಎದುರಿಸಬಹುದು. ಇದಕ್ಕೆ ಗುರುಗಳ ಮಾರ್ಗದರ್ಶನ ಬೇಕು. ಈ ಮಾರ್ಗದರ್ಶನವನ್ನು ಸನಾತನ ಸಂಸ್ಥೆಯು ಸಮಾಜಕ್ಕೆ ಪರಿಪೂರ್ಣವಾಗಿ ನೀಡುತ್ತದೆ. ಎಂದು ಹೇಳಿದರು.


 
            
