ಶಿರಾಡಿ ಘಾಟ್ ನಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಕುಸಿದು ಬಿದ್ದ ಗುಡ್ಡ- ಚಾಲಕ ಪಾರು

0

ಬೆಳ್ತಂಗಡಿ: ಸಕಲೇಶಪುರ ತಾಲೂಕಿನ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ದೊಡ್ಡತಪ್ಪಲು ಎಂಬಲ್ಲಿ ಭೂ ಕುಸಿತ ಉಂಟಾಗಿ ಓಮಿನಿಯೊಂದು ಜಖಂಗೊಂಡಿದ್ದು, ಅದೃಷ್ಟವಶಾತ್‌ ಕಾರು ಚಾಲಕ ಅಪಾಯದಿಂದ ಪಾರಾದ ಘಟನೆ ಜು.18ರ ಗುರುವಾರ ನಸುಕಿನ ಜಾವ 2.30ರ ಸಮಯಕ್ಕೆ ಸಂಭವಿಸಿದೆ.

ಬೇಲೂರು ತಾಲೂಕಿನ ಬಿಕ್ಕೊಡು ಮೂಲದ ಶರತ್ ಎಂಬವರು ಮಂಗಳೂರು ಕಡೆಯಿಂದ ಸಕಲೇಶಪುರ ಮಾರ್ಗವಾಗಿ ಬರುವ ಸಂದರ್ಭ ದೊಡ್ಡತಪ್ಪಲು ಸಮೀಪ ಭೂ ಕುಸಿತ ಉಂಟಾಗಿ ಕಾರಿನ ಮೇಲೆ ಬಿದ್ದಿದ್ದು ಕಾರು ಮಣ್ಣಿನ ರಾಶಿಯಲ್ಲಿ ಸಿಲುಕಿ ಸಂಪೂರ್ಣವಾಗಿ ಕುಸಿದಿದೆ.

ಈ ಸಂದರ್ಭದಲ್ಲಿ ಹೆದ್ದಾರಿ ಕಾಮಗಾರಿ ಗುತ್ತಿಗೆದಾರ ಕಂಪನಿಯ ಬಿಹಾರ ಮೂಲದ ಕಾರ್ಮಿಕಕರು ಅಖಿಲೇಶ್, ಶರತ್ ಅವರನ್ನು ವಾಹನದಿಂದ ಹೊರಗೆ ಕರೆತಂದು ಅವರ ಪ್ರಾಣ ಉಳಿಸಿದ್ದಾರೆ.

ಅಖಿಲೇಶ್ ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು, ಶರತ್ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಭೂ ಕುಸಿತದಿಂದ ಶಿರಾಡಿಘಾಟ್ ನಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದ್ದು, ಘಟನೆ ನಡೆದ ಸ್ಥಳದಿಂದ ಎರಡೂ ಕಡೆಗೆ 5-5 ಕಿ.ಮೀ. ಟ್ರಾಫಿಕ್ ಜಾಮ್ ಉಂಟಾಗಿತ್ತು, ಹೆದ್ದಾರಿ ಕಾಮಗಾರಿಯವರು ಮಣ್ಣು ತೆರವುಗೊಳಿಸು ಕಾರ್ಯದಲ್ಲಿ ನಿರತರಾಗಿದ್ದು, ಮಣ್ಣಿನ ಕುಸಿತ ನಡೆಯುತ್ತಲೇ ಇದೆ. ಸದ್ಯದ ಮಟ್ಟಿಗೆ ಏಕಮುಖ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.

LEAVE A REPLY

Please enter your comment!
Please enter your name here