ದೊಂಡೋಲೆ: ಜುಲೈ 11ರಂದು ಪ್ರಕಟವಾದ ಇನ್ಸಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾದ ಸಿಎ ಫೈನಲ್ ಪರೀಕ್ಷೆಯಲ್ಲಿ ಧರ್ಮಸ್ಥಳದ ದೊಂಡೋಲೆಯ ಶಂಕರರಾಮ್ ರಾವ್ ರವರ ಮೊಮ್ಮಗ ಆದಿತ್ಯ ಎನ್ ರಾವ್ ದೇಶದಲ್ಲೇ 19ನೇ ರ್ಯಾಂಕ್ ಪಡೆದಿದ್ದಾರೆ.
ದೊಂಡೋಲೆ ಶಂಕರರಾಮ್ ರಾವ್ ರವರ ಪುತ್ರಿ ಕಮಲಾಕ್ಷಿ ಎನ್ ರಾವ್ ಹಾಗೂ ಪಾಣೆಮಂಗಳೂರು ನರಿಕೊಂಬು ನಾಗೇಶ್ ಪಿ ರಾವ್ ದಂಪತಿಯ ಪುತ್ರನಾಗಿರುವ ಆದಿತ್ಯ ಈ ಸಾಧನೆ ಮಾಡಿದ್ದಾರೆ.
ಸಿಎ ಇಂಟರ್ ಮೀಡಿಯೇಟ್ ಪರೀಕ್ಷೆಯನ್ನೂ ಬರೆದಿದ್ದ ಆದಿತ್ಯ ಆಲ್ ಇಂಡಿಯಾದಲ್ಲಿ 31ನೇ ರ‍್ಯಾಂಕ್ ಪಡೆದಿದ್ದು, ಸಿಎ ಫೈನಲ್ ನಲ್ಲಿ 19ನೇ ರ್ಯಾಂಕ್ ಪಡೆದಿದ್ದಾರೆ.
ಮುಂಬೈನ ಸ್ವಾಮಿವಿವೇಕಾನಂದ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಶ್ರೀ ಸತ್ಯಸಾಯಿ ಹೈಯರ್ ಸೆಕೆಂಡರಿ ಸ್ಕೂಲ್ ಪುಟ್ಟಭರ್ತಿಯಲ್ಲಿ ಪದವಿಪೂರ್ವ, ಶ್ರೀ ಸತ್ಯಸಾಯಿ ಇನ್ಸಿಟ್ಯೂಟ್ ಆಫ್ ಹೈಯರ್ ಲರ್ನಿಂಗ್ ವೈಟ್ ಫೀಲ್ಡ್ ಬೆಂಗಳೂರಿನಲ್ಲಿ ಪದವಿ ಶಿಕ್ಷಣ ಪಡೆದಿದ್ದಾರೆ.
ಸಿಎ ಪರೀಕ್ಷೆಯನ್ನು ಒಟ್ಟು 1,69,000 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಇದರಲ್ಲಿ ಗ್ರೂಪ್ 1, ಗ್ರೂಪ್ 2ಅಂತ ವಿಭಾಗಗಳಿದ್ದೂ, ಎರಡೂ ಗ್ರೂಪ್ ನಲ್ಲಿ 35,000 ಜನರು ಪರೀಕ್ಷೆ ಬರೆದಿದ್ದು, ಇದರಲ್ಲಿ ಏಳು ಸಾವಿರಜನರು ಪಾಸಾಗಿದ್ದು, ಇವರಲ್ಲಿ ಆದಿತ್ಯ 19ನೇ ರ್ಯಾಂಕ್ ಪಡೆದಿದ್ದಾರೆ.
ಸುದ್ದಿ ಪ್ರತಿನಿಧಿ ಆದಿತ್ಯ ಎನ್ ರಾವ್ ರವರನ್ನು ಸಂಪರ್ಕಿಸಿದಾಗ “ನನ್ನ ಸಾಧನೆಗೆ ಕಾರಣ ನಾನು ನಿರಂತರವಾಗಿ ಪಟ್ಟ ಶ್ರಮ ಕಾರಣ. ಅಪ್ಪ, ಅಮ್ಮ, ಅಕ್ಕ ಗಾಯತ್ರಿಯವರ ಸಾಥ್ ತುಂಬಾನೇ ಇದೆ. ನನಗಾಗಿ ಇವರೆಲ್ಲ ತುಂಬಾನೇ ತ್ಯಾಗ ಮಾಡಿದ್ದಾರೆ. ಧರ್ಮಸ್ಥಳದ ದೊಂಡೋಲೆಯಲ್ಲಿ ಅಜ್ಜ,ಅಜ್ಜಿ,ಅತ್ತೆ,ಮಾವ ನನಗೆ ತುಂಬಾನೇ ಸಪೋರ್ಟ್ ಮಾಡಿದ್ದಾರೆ. ಅಲ್ಲದೇ ನನಗಾಗಿ ದೇವರಲ್ಲಿ ಪ್ರಾರ್ಥಿಸಿದ್ದಾರೆ. ರ‍್ಯಾಂಕ್ ಬರಲು ನನ್ನ ಓದು ಮತ್ತು ದೇವರ ಅನುಗ್ರಹ ಕಾರಣ” ಎಂದರು.