ಉಜಿರೆ: ಜಗತ್ತು ಎಷ್ಟು ಸುಂದರವೊ ಅಷ್ಟೇ ಕೆಟ್ಟದಾಗಿದೆ. ವಿದ್ಯಾರ್ಥಿಗಳ ಮನಸ್ಸನ್ನು ಕೆಡಿಸುವ ಎಲ್ಲಾ ವ್ಯವಸ್ಥೆಗಳು ಸುತ್ತ ಮುತ್ತ ಇದ್ದು, ನಾವು ಜಾಗೃತ ಮನಸ್ಥಿತಿ ಬೆಳೆಸಿಕೊಂಡರೆ ನಮ್ಮ ಭವಿಷ್ಯ, ಕಲಿಕೆ, ಸಾಧನೆಯನ್ನು ಮುನ್ನಡೆಸಬಹುದು. ಪಿಯುಸಿ ಹಂತದಲ್ಲಿ ಮೌಲ್ಯಗಳನ್ನು ಬೆಳೆಸಿಕೊಂಡರೆ ಮುಂದಿನ ಕಾಲಘಟ್ಟ ಸುಗಮಗೊಳಿಸಬಹುದು.
ಶಿಕ್ಷಣ ಕ್ಷೇತ್ರದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಸ್ಪರ್ಧೆಗಳಿಗೆ ನಾವು ಹೊಂದಿಕೊಳ್ಳಲು ನಿತ್ಯ ಅಭ್ಯಾಸ ನಿರತತೆ ಬೇಕೇ ಬೇಕು. ಸಂಸ್ಥೆ ಹಳೆ ವಿದ್ಯಾರ್ಥಿಯಾಗಿ ನಮ್ಮನ್ನು ಬೆಳೆಸಿದ ರೀತಿಗೆ ನಾವು ಈ ಮಟ್ಟಕ್ಕೇರಲು ಸಾಧ್ಯವಾಗಿದೆ. ಕಲಿಕೆ ಜೊತೆಗೆ ಮೌಲ್ಯ ಶಿಕ್ಷಣ, ನೈತಿಕತೆ, ಕ್ರೀಡೆ, ಸಾಂಸ್ಕೃತಿಕ, ಧಾರ್ಮಿಕ ಎಲ್ಲವೂ ಇಲ್ಲಿ ನಿರಂತರವಾಗಿ ಸಿಕ್ಕಿದ ಕಾರಣ ಭವಿಷ್ಯ ಕಟ್ಟಲು ಅನುಕೂಲಕರವೆಂದು ಸಂಸ್ಥೆ ಹಳೆ ವಿದ್ಯಾರ್ಥಿ ಹಾಗೂ ಮಂಗಳೂರು ಕೆ.ಎಂ. ಸಿ ಯಲ್ಲಿ ಕಾರ್ಡಿಯಾಲಾಜಿಸ್ಟ್ ಡಾ. ವಿಕ್ರಂ ಶಾನುಭಾಗ್ ಹೇಳಿದರು. ಕಾಲೇಜಿನ ವಿದ್ಯಾರ್ಥಿ ಸಂಸತ್ತು ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇನ್ನೊರ್ವ ಅತಿಥಿಯಾಗಿ ಆಗಮಿಸಿದ್ದ ಎಸ್.ಡಿ.ಎಂ ಸಂಸ್ಥೆಯ ವಿದ್ಯಾರ್ಥಿ ಕ್ಷೇಮ ಪಾಲನಾ ಅಧಿಕಾರಿ ಶ್ರೀಯುತ ಧನ್ಯಕುಮಾರ್ ನಾಯಕನ ಗುಣಲಕ್ಷಣಗಳು ಹೇಗಿರಬೇಕು, ನಾಯಕತ್ವ ಅಧಿಕಾರವಲ್ಲ ಅದೊಂದು ಜವಾಬ್ದಾರಿ, ದೂರದರ್ಶಿ ಗುಣಗಳೊಂದಿಗೆ ಆಂತರಿಕ ಶಕ್ತಿ ಜಾಗ್ರತಗೊಳಿಸಿ ಕಾರ್ಯಾಸನ್ನದ್ದರಾಗಿ, ಮಕ್ಕಳು ಸಿಕ್ಕಿದನ್ನು ಹೆಕ್ಕಿ ತಿನ್ನುವ ಹಕ್ಕಿಗಳಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಶ್ರೀಯುತ ಸುನಿಲ್ ಪಂಡಿತ್ ಪ್ರಮಾಣ ವಚನ ಬೋಧಿಸಿ, ವಿದ್ಯಾರ್ಥಿಗಳಿಗೆ ಶುಭ ಕೋರಿದರು.
ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಬ್ಜಿತ್ ದಿನೇಶ್ ಕಾರ್ಯದರ್ಶಿ ಶ್ರೇಯಸ್ ಗೌಡ ಟಿ.ಏನ್ ಆಯ್ಕೆಯಾದರು.
ಕಾಲೇಜಿನ ಉಪನ್ಯಾಸಕ ವೃಂದ ಹಾಗೂ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕಾಲೇಜಿನ ದೈಹಿಕ ಮಾರ್ಗದರ್ಶಕ ಲಕ್ಷ್ಮಣ್ ಜಿ. ಡಿ. ಸ್ವಾಗತಿಸಿದರು.
ಕಾಲೇಜಿನ ಉಪಪ್ರಾಂಶುಪಾಲ ಶ್ರೀಯುತ ಮನೀಶ್ ಕುಮಾರ್ ಉಪಸ್ಥಿತರಿದ್ದರು.
ಇಂಗ್ಲೀಷ್ ವಿಭಾಗದ ಮುಖ್ಯಸ್ಥೆ ಭವ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.