ಮುಂಡಾಜೆ: ಮುಂಡಾಜೆ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಪ್ರಸಕ್ತ ಸಾಲಿನ ಕಾರ್ಯಚಟುವಟಿಕೆಗಳ ಉದ್ಘಾಟನಾ ಸಮಾರಂಭವು ಜುಲೈ 5ರಂದು ನಡೆಯಿತು.
ಉದ್ಘಾಟನೆಯನ್ನು ನೆರವೇರಿಸಿದ ಶ್ರೀ.ಧ.ಮ.ಕಾಲೇಜಿನ ಪ್ರಾಧ್ಯಾಪಕ ಶ್ರೀ ಗಣೇಶ.ವಿ ಶೆಂಡ್ಯೆಯವರು ಮಾತನಾಡಿ, ಎನ್.ಎಸ್.ಎಸ್ ಸ್ವಯಂಸೇವಕರು ತಾವು ಮಾಡುವ ಪ್ರತಿಯೊಂದು ಕೆಲಸವನ್ನು ಮನಸ್ಸಿನಿಂದ ಮಾಡಬೇಕು.
ಪರಿಸರ ಪ್ರಜ್ಞೆ ಬೆಳೆಸಿಕೊಂಡು, ಪ್ರಚಲಿತ ವಿದ್ಯಮಾನಗಳ ಬಗ್ಗೆ ಜಾಗೃತಿ ಹೊಂದಿರಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಜಾಲಿ ಓ.ಎ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮುಂಡಾಜೆ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ವಿನಯಚಂದ್ರ, ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸಹಕಾರ್ಯಕ್ರಮಾಧಿಕಾರಿ ಸಂದೀಪ್.ಐ ಉಪಸ್ಥಿತರಿದ್ದರು.
ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ನಮಿತಾ ಕೆ.ಆರ್ ಸ್ವಾಗತಿಸಿದರು.
ಸ್ವಯಂಸೇವಕ ಲತೇಶ್ ನಿರೂಪಿಸಿ, ಸ್ವಯಂಸೇವಕಿ ಕುಮಾರಿ ಛಾಯಾ ಧನ್ಯವಾದವಿತ್ತರು.
p>