

ಬೆಳ್ತಂಗಡಿ: ಕಾಂಗ್ರೆಸ್ ಗ್ರಾಮೀಣ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷರು, ಕಥೋಲಿಕ್ ಕಾಂಗ್ರೆಸ್ ಜಾಗತಿಕ ಸಮಿತಿಯ ನೂತನ ಕಾರ್ಯದರ್ಶಿಯಾಗಿ ಆಯ್ಕೆಯಾದ ಸಿರಿಯನ್ ಕ್ಯಾಥೋಲಿಕ್ ವಿವಿದೋದ್ದೇಶ ಸಹಕಾರ ಸಂಘದ ನಿರ್ದೇಶಕ ಜೈಸನ್ ಪಟ್ಟೇರಿಲ್ ರವರನ್ನು ಸಿರಿಯನ್ ಕ್ಯಾಥೋಲಿಕ್ ವಿವಿದೋದ್ದೇಶ ಸಹಕಾರ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಅಧ್ಯಕ್ಷ ಆನಿಲ್ ಎ.ಜೆ ಉಪಾಧ್ಯಕ್ಷ ಜಾರ್ಜ್ ಕಾಂಜಾಲ್ ನಿರ್ದೇಶಕರುಗಳಾದ ಸೆಬಾಸ್ಟೀನ್ ವ್ಯಪನ, ಆಂದಾನಿ ಕೆ.ಡಿ. ಬಾಬು ತೋಮಸ್, ಬಿಜು ಪಿ.ಪಿ, ಸೆಬಾಸ್ಟೀನ್ ಬಂಗಾಡಿ, ಬಿಜು ಎಮ್.ಜೆ ಮಂಗಳೂರು, ಸೋಫಿ ಜೋಸೆಫ್, ಫಿಲೋಮೀನ ವಿ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮನೋಜ್ ಪಿ.ಎ ಹಾಗೊ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.