ಉರುವಾಲುಪದವು: ನೂತನವಾಗಿ ಪ್ರಾರಂಭಿಸಿದ ನಕ್ಷತ್ರ ಚಾರಿಟೇಬಲ್ ಟ್ರಸ್ಟ್ ಎನ್ ಸಿ ಎಫ್ ಉದ್ಘಾಟನೆ

0

ಉರುವಾಲುಪದವು: ಉರುವಾಲುಪದವಿನಲ್ಲಿ ನೂತನವಾಗಿ ಪ್ರಾರಂಭಿಸಿದ ನಕ್ಷತ್ರ ಚಾರಿಟೇಬಲ್ ಫೌಂಡೇಶನ್ ಟ್ರಸ್ಟ್ ಸಮಿತಿ ಜೂನ್ 23ರಂದು ಲೋಕಾರ್ಪಣೆಗೊಂಡಿತು.ಬೆಳ್ತಂಗಡಿ ತಾಲೂಕು ಸಂಯುಕ್ತ ಸಹಾಯಕ ಖಾಝಿ ಸೆಯ್ಯೆದ್ ಅಬ್ದುಲ್ ರಹ್ಮಾನ್ ಸಾದಾತ್ ತಂಙಳ್ ರವರು ಎನ್ ಸಿ ಎಫ್ ಟ್ರೆಸ್ಟ್ ಕಛೇರಿಯನ್ನು ಉದ್ಘಾಟಿಸಿದರು.ನಂತರ ಮಾತನಾಡಿದ ತಂಙಳ್ ರವರು ದೇವರು ನಮಗೆ ನೀಡಿದ ಸಂಪತ್ತಿನಿಂದ ಒಂದಂಶವನ್ನು ನಾವು ಬಡ ನಿರ್ಗತಿಕರ ಹಿಂದುಳಿದ ವರ್ಗಗಳ ಅನಾಥರ ಅಂಗವಿಕಲರ ವಿಧವೆಯರ ರೋಗಿಗಳ ಕಣ್ಣೀರೊರೆಸಲು ವಿನಿಯೋಗಿಸಿದಲ್ಲಿ ದೇವರು ನಮ್ಮ ಕಷ್ಟ ಕಾರ್ಪಣ್ಯಗಳನ್ನು ದೂರ ಮಾಡುತ್ತಾನೆ ಎಂದರು.

ಎನ್ ಸಿ ಎಫ್ ಸ್ಥಾಪಕ ಹಾಗೂ ಅಲ್ ಬಿರ್ರ್ ಸ್ಕೂಲ್ ಕರಾಯ ಇದರ ಅಧ್ಯಕ್ಷ ಪಿ.ಕೆ ಅಬೂಬಕ್ಕರ್ ಸಿದ್ದೀಕ್ ಉರುವಾಲುಪದವು ಇವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಉರುವಾಲು ಮಸೀದಿಯ ಮುಖ್ಯ ಗುರುಗಳಾದ ಮುಹಮ್ಮದ್ ಮಸೂದ್ ಹಿಮಮಿ ಕಾಮಿಲ್ ಸಖಾಫಿಯವರು ಉದ್ಘಾಟಿಸಿದರು.ಟ್ರಸ್ಟ್ ನ ಅಧ್ಯಕ್ಷ ಎಂ.ಪಿ ಯಾಕೂಬ್ ಮಾಪಾಲ್ ರವರು ಟ್ರಸ್ಟಿನ ಲೋಗೋ ಬಿಡುಗಡೆ ಮಾಡಿದರು.

ಸೆಯ್ಯೆದ್ ಅಹ್ಮದ್ ಜಲಾಲುದ್ದೀನ್ ಸ ಅದಿ ತಂಙಳ್ ಪೊಸೋಟು, ಜಾಬಿರ್ ನಿಝಾಮಿ ನಾಪೊಕ್ಲು, ಎಸ್ ಬಿ ಮುಹಮ್ಮದ್ ದಾರಿಮಿ ಉಸ್ತಾದ್, ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಚಾರಿಟೀ ಸೇವೆ ಸಲ್ಲಿಸುವ ನಾಯಕರು ಮಾತನಾಡಿ ಶುಭ ಹಾರೈಸಿದರು. ಶಿಕ್ಷಣ ಪ್ರೇಮಿ ಹರೇಕಲ ಹಾಜಬ್ಬ ಸೇರಿದಂತೆ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು.

ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಇದರ ಸಹಯೋಗದೊಂದಿಗೆ ರಕ್ತದಾನ ಶಿಬಿರವನ್ನು ಡಾ ಪ್ರಭುಸ್ ಕೇರ್ ಹಾಗೂ ಕ್ಯೂರ್ ಸ್ಪೆಶಾಲಿಟಿ ಕ್ಲಿನಿಕ್ ಪುತ್ತೂರು ಇದರ ಸಹಯೋಗದೊಂದಿಗೆ.ಆರೋಗ್ಯ ತಪಾಸಣಾ ಶಿಬಿರ, ಉಚಿತ ಔಷಧಿ ವಿತರಣಾ ಕಾರ್ಯಕ್ರಮ ನಡೆಸಲಾಯಿತು. ಹಾಗೂ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಕೆಪಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ ಆರ್ ಪೂಜಾರಿ, ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ಅಯ್ಯೂಬ್ ಡಿ ಕೆ ಕರಾಯ, ಆಶಿಫ್ ಆಪತ್ಭಾಂದವ ಮಂಗಳೂರು, ಅಬ್ಬಾಸ್ ನಾಟೆಕ್ಕಲ್ಲು, ರಶೀದ್ ಕಾಜೂರು, ಸಿದ್ದೀಖ್ ಕೊಡಕ್ಕಲ್, ಖಾಸಿಂ ಮದನಿ ಕರಾಯ, ಅಬ್ದುಲ್ ಹಮೀದ್ ದಾರಿಮಿ ಸಂಪ್ಯ, ಕಾಸಿಂ ಮದನಿ ಉರುವಾಲು ಪದವು, ಹಮೀದ್ ಕೆ ವಿ ಅಧ್ಯಕ್ಷರು, ಬಿ ಎಸ್ ಜೆ ಎಂ ಉರುವಾಲು ಪದವು, ಆದಂ ದಾರಿಮಿ ಕೊರಿಂಜ, ಅಬ್ದುರ್ರಹ್ಮಾನ್ ಸಖಾಫಿ ಮಾಪಾಲು, ಇಸ್ಮಾಯಿಲ್ ಮದನಿ ಉರುವಾಲು ಪದವು, ಅಬೂಬಕ್ಕರ್ ಆಳಕ್ಕೆ ಪೂಂಜಾಲಕಟ್ಟೆ, ಶರೀಫ್ ಕೊಡ್ಲಿಪೇಟೆ, ಮನ್ಸೂರ್ ಬಿ ಸಿ ರೋಡ್, ಇಫಾಝ್ ಬನ್ನೂರು, ಜಾಬಿರ್ ಉಪ್ಪಿನಂಗಡಿ, ಶಾಖಿರ್ ಅಳಕೆಮಜಲು, ಹಾಜಿ ಝಕರಿಯಾ ಅಗ್ನಾಡಿ, ಅಬ್ದುಲ್ ಖಾದರ್ ಹಾಜಿ ಕರಾಯ, ಮುಸ್ತಫಾ ಉಪ್ಪಿನಂಗಡಿ, ಕಾಸಿಂ ಪದ್ಮುಂಜ, ಆದಂ ಹಾಜಿ ಮಾಪಾಲು, ಅಬ್ದುರ್ರಹ್ಮಾನ್ ಹಾಜಿ ಅಳಕೆಮಜಲು, ಕಾಸಿಂ ಕೊರಿಂಜ, ಎಸ್ ಎ ಅಬ್ಬಾಸ್ ಉರುವಾಲು ಪದವು, ಕಾಸಿಂ ಪೀರ್ಯ, ಟಿ ಕೆ ಸುಲೈಮಾನ್ ಶೂಂಟಿಪಳಿಕೆ, ಬಾವೊಂಙ ಹಾಜಿ ಉರುವಾಲು ಪದವು, ಎನ್ ಸಿ ಎಫ್ ಉಪಾಧ್ಯಕ್ಷ ಅಶ್ರಫ್ ಉರುವಾಲು ಪದವು, ಲತೀಫ್ ಉರುವಾಲು ಪದವು, ಮುನ್ನವರ್ ಉರುವಾಲು ಪದವು, ಸಫ್ವಾನ್ ಉರುವಾಲು ಪದವು, ನೌಶಾದ್ ಅಬ್ಬಾಸ್ ಉರುವಾಲು ಪದವು, ಶರೀಫ್ ಕರಾಯ, ಸಿದ್ಧಿಕ್ ಉರುವಾಲು ಪದವು, ಇಶಾಕ್ ಮದನಿ ಉರುವಾಲು ಪದವು, ಅಬ್ಬಾಸ್ ಬಟ್ಲಡ್ಕ, ಮುಹಮ್ಮದ್ ಬಂದಾರು, ಆದಂ ಅಲ್ ಮದೀನಾ ಕುಪ್ಪೆಟ್ಟಿ, ಹನೀಫ್ ಪುತ್ತೂರು, ಮುಹಮ್ಮದ್ ಕುಂಞಿ ಜೋಗಿಬೆಟ್ಟು, ಇಲ್ಯಾಸ್ ಕರಾಯ ಉಪಸ್ಥಿತರಿದ್ದರು.

ಉಮರ್ ಫಾರೂಕ್ ಸ ಅದಿ ಹಿಮಮಿ ಉರುವಾಲು ಪದವು, ಕಿರಾಅತ್ ಪಾರಾಯಣ ಮಾಡಿದರು.ಕರಾಯ ಅಬ್ದುಲ್ ಜಬ್ಬಾರ್ ಅಸ್ಲಮಿ ಯವರು ಕಾರ್ಯಕ್ರಮ ನಿರೂಪಿಸಿದರು.ಅಬ್ದುಲ್ ಶುಕೂರ್, ದಾರಿಮಿ ಕರಾಯ ಸಂಚಾಲಕರು ಅಲ್ ಬಿರ್ರ್ ಸ್ಕೂಲ್ ದ.ಕ ಜಿಲ್ಲೆ ಇವರು ಸ್ವಾಗತಿಸಿದರು.ಟ್ರಸ್ಟ್ ಕಾರ್ಯದರ್ಶಿ ಅಬ್ದುರ್ರಶೀದ್ ರವರು ಧನ್ಯವಾದ ಸಲ್ಲಿಸಿದರು.

LEAVE A REPLY

Please enter your comment!
Please enter your name here