ಧರ್ಮಸ್ಥಳ: ಶ್ರೀ.ಧ.ಮ.ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿ ಮಂಡಲದ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು. ಇದರ ಉದ್ಘಾಟನೆಯನ್ನು ಧನ್ಯ ಕುಮಾರ್, ವಿದ್ಯಾರ್ಥಿ ಕ್ಷೇಮ ಪಾಲನಾ ಅಧಿಕಾರಿ, ಎಸ್ ಡಿ ಎಂ ಇ ಸೊಸೈಟಿ, ಉಜಿರೆ ಇವರು ನೆರವೇರಿಸಿದರು. ಬ್ಯಾಂಡ್ ಸೇಟ್ಟಿನ ರಾಷ್ಟ್ರಗೀತೆಯ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು.
ಪ್ರಮಾಣವಚನ ಬೋಧನೆಯನ್ನು ಪರಿಮಳ ಎಂ ವಿ, ಮುಖ್ಯ ಶಿಕ್ಷಕಿ, ಧರ್ಮಸ್ಥಳ ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆ ರವರು ಬೋಧಿಸಿದರು.
ತದನಂತರ ಮಾತನಾಡಿದ ಇವರು ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ಜವಾಬ್ದಾರಿಯ ಕುರಿತು, ಅವರ ಮಹತ್ವದ ಕುರಿತು ವಿದ್ಯಾರ್ಥಿ ನಾಯಕರುಗಳಿಗೆ ತಿಳಿಹೇಳಿದರು. ಇಂದಿನ ಅತಿಥಿ ಧನ್ಯ ಕುಮಾರ್ ಇವರು ವಿದ್ಯಾರ್ಥಿ ನಾಯಕರುಗಳಿಗೆ ಬ್ಯಾಜನ್ನು ಹತ್ತಾಂತರಿಸುವ ಮುಖಾಂತರ ಮಂತ್ರಿಮಂಡಲಕ್ಕೆ ಚಾಲನೆಯನ್ನು ನೀಡಿದರು. ತದನಂತರ ಶಾಲಾ ನಾಯಕ 10ನೇ ತರಗತಿಯ ಸುಧಾಮ ಮಾತನಾಡಿ ತನ್ನ ನಾಯಕತ್ವದಲ್ಲಿ ಶಾಲೆಯಲ್ಲಿ ನಡೆಯಬೇಕಾದ ಎಲ್ಲಾ ಕಾರ್ಯಗಳ ಜವಾಬ್ದಾರಿಯನ್ನು ತೆಗೆದುಕೊಂಡು, ಉತ್ತಮ ನಾಯಕತ್ವವನ್ನು ನೀಡುವ ಭರವಸೆಯನ್ನು ನೀಡಿದರು. ನಂತರ ಅತಿಥಿಗಳು ಮಾತನಾಡಿ ನಾಯಕತ್ವ ಗುಣವನ್ನು ಬೆಳೆಸಿಕೊಳ್ಳುವ ಮಾರ್ಗಗಳು, ವಿದ್ಯಾರ್ಥಿ ಜೀವನದಲ್ಲಿ ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕಾದ ಉತ್ತಮ ಮೌಲ್ಯಗಳು ಬಗ್ಗೆ, ವಿದ್ಯಾರ್ಥಿ ನಾಯಕರುಗಳು ಹಾಗೂ ವಿದ್ಯಾರ್ಥಿಗಳ ಬಾಂಧವ್ಯಗಳ ಬಗ್ಗೆ ತಿಳಿ ಹೇಳಿದರು. ಹತ್ತನೇ ತರಗತಿಯ ಮೌಲ್ಯ ಈ ಕಾರ್ಯಕ್ರಮಕ್ಕೆ ಸ್ವಾಗತವನ್ನು ಕೋರಿದರೆ, ಹತ್ತನೇ ತರಗತಿಯ ಚಿನ್ಮೈರೈ ಧನ್ಯವಾದ ಸಮರ್ಪಿಸಿದರು. ಈ ಕಾರ್ಯಕ್ರಮವು ಹತ್ತನೇ ತರಗತಿಯ ಅಂಜನ ರೋಜ್ ಇವರಿಂದ ನಿರೂಪಿಸಲ್ಪಟ್ಟಿತು. ಅತಿಥಿ ಪರಿಚಯವನ್ನು ಆನ್ಮಿಯ, ಹತ್ತನೇ ತರಗತಿ ಇವರು ನಡೆಸಿಕೊಟ್ಟರು.
ಶಾಲಾ ಮುಖ್ಯಮಂತ್ರಿಯಾಗಿ ಹತ್ತನೇ ತರಗತಿಯ ಸುಧಾಮ, ಶಾಲಾ ಉಪಮುಖ್ಯಮಂತ್ರಿಯಾಗಿ ಒಂಬತ್ತನೇ ತರಗತಿಯ ಚಂದನ, ಶಿಸ್ತು ಪಾಲನ ಮಂತ್ರಿ 9ನೇ ತರಗತಿಯ ಆದರ್ಶ್ ಹೆಚ್ಚು ವೈ, ನೀರಾವರಿ ಮಂತ್ರಿ ಯಾಗಿ ಎಂಟನೇ ತರಗತಿಯ ಅನುಜ್ಞಾ, ಆರೋಗ್ಯ ಮಂತ್ರಿಯಾಗಿ ಎಂಟನೇ ತರಗತಿಯ ಕ್ಷಿತಿಷ್, ಸಾಂಸ್ಕೃತಿಕ ಮಂತ್ರಿಯಾಗಿ 9ನೇ ತರಗತಿಯ ಧನ್ಯಶ್ರೀ, ಕ್ರೀಡಾ ಮಂತ್ರಿಯಾಗಿ ಹತ್ತನೇ ತರಗತಿಯ ಸಮೀಕ್ಷ, ಶಿಕ್ಷಣ ಮಂತ್ರಿಯಾಗಿ ಒಂಬತ್ತನೇ ತರಗತಿಯ ಜೇಷ್ಠ ಶರ್ಮ ಪ್ರಮಾಣವಚನ ಸ್ವೀಕರಿಸಿದರು.