ವೇಣೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಥಮ ದರ್ಜೆ ಸಹಾಯಕ ಸುರೇಶ್ ಪೂಜಾರಿ ಸೇವೆಯಿಂದ ನಿವೃತ್ತಿ

0

ವೇಣೂರು: ವೇಣೂರು ಆರೋಗ್ಯ ಕೇಂದ್ರದ ಪ್ರಥಮ ದರ್ಜೆ ಸಹಾಯಕರಾದ ಸುರೇಶ್ ಪೂಜಾರಿಯವರು ಸೇವೆಯಿಂದ ಮೇ 31ರಂದು ನಿವೃತ್ತರಾದರು. 1985ರಲ್ಲಿ ಆರೋಗ್ಯ ಇಲಾಖೆಯಲ್ಲಿ ವೃತ್ತಿ ಜೀವನ ಆರಂಭಿಸಿ ಸುದೀರ್ಘ 39 ವರ್ಷಗಳ ಕಾಲ ಜಿಲ್ಲೆಯ ವಿವಿಧ ಕಡೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಸುರೇಶ್ ಪೂಜಾರಿಯವರು 1985-2009 ವೇಣೂರು ಆರೋಗ್ಯ ಇಲಾಖೆ, 2009-2016 ಮೂಡಬಿದ್ರೆ ರಾಷ್ಟ್ರೀಯ ಕಷ್ಠರೋಗ ನಿವಾರಣ ಘಟಕ, 2016-2020 ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ ಮಂಗಳೂರು, 2020-24 ವೇಣೂರು ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಸೇವೆ ಸಲ್ಲಿಸಿದ್ದಾರೆ.

ಕರಿಮೇಣಲು ಶಾಂತಿನಗರ ನಿವಾಸಿಯಾದ ಇವರು ಪತ್ನಿ, ಮಕ್ಕಳೊಂದಿಗೆ ಸುಖಿ ಸಂಸಾರ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here