ಕೊಕ್ಕಡ: ಕೌಕ್ರಾಡಿ ಸಂತ ಜೋನರ ಹಿ.ಪ್ರಾ.ಶಾಲೆಯಲ್ಲಿ ಮೇ 31ರಂದು 2024-25ನೇ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವವನ್ನು ಶಾಲಾ ಸಂಚಾಲಕ ವಂದನೀಯ ಫಾ. ಅನಿಲ್ ಪ್ರಕಾಶ್ ಡಿಸಿಲ್ವಾ ಇವರುಗಳನ್ನು ಬ್ಯಾಂಡ್ ಸೆಟ್ ನ ಮೂಲಕ ಸ್ವಾಗತಿಸಿದರು.
ಅತಿಥಿ ಗಣ್ಯರಿಂದ ಸಾಂಕೇತಿಕವಾಗಿ ದೀಪ ಬೆಳಗಿಸುವುದರ ಜೊತೆಗೆ ಹೊಸ ಮಕ್ಕಳಿಗೆ ಹೂ ನೀಡಿ, ಪುಸ್ತಕ ವಿತರಿಸುವ ಮೂಲಕ ಸಮಾರಂಭದ ಉದ್ಘಾಟನೆಯನ್ನು ಮಾಡಲಾಯಿತು.
ಶಾಲಾ ಸಂಚಾಲಕ ಫಾ. ಅನಿಲ್ ಪ್ರಕಾಶ್ ಡಿಸಿಲ್ವಾರವರು ಅಧ್ಯಕ್ಷತೆಯನ್ನು ವಹಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಹೇಮಾವತಿ ದಾಮೋದರ್ ಭಟ್, ಜೆಸಿಐ ಇಂಡಿಯ ವಲಯ ತರಬೇತುದಾರರು ಜೀವನದ ಎಲ್ಲಾ ಹಂತಗಳಲ್ಲಿ ವಿದ್ಯಾರ್ಥಿ ಜೀವನ ಶ್ರೇಷ್ಠ ಎಂದು ಉತ್ತಮ ಮಾತುಗಳನ್ನಾಡಿದರು.
ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷ ಹೆರಾಲ್ಡ್ ಪ್ರಕಾಶ್ ಗಲ್ಭಾವೊ, ಚರ್ಚ್ ನ ಪಾಲನ ಮಂಡಳಿಯ ಉಪಾಧ್ಯಕ್ಷ ಪ್ರವೀಣ್ ನೋಯೆಲ್ ಮೊಂತೇರೊ, ಹೆತ್ತವರು-ಪೋಷಕರು, ಹಳೆ ವಿದ್ಯಾರ್ಥಿಗಳು, ಶಿಕ್ಷಕ ವೃಂದ ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯನಿ ಜೆನೆವಿವ್ ಫೆರ್ನಾಂಡಿಸ್ ಪ್ರಾಸ್ತಾವಿಕ ಮಾತುಗಳ ಮೂಲಕ ಶಾಲಾ ನಿಯಮಗಳನ್ನು ತಿಳಿಸಿದರು. ಹೆತ್ತವರು, ಸರ್ವ ಸಭಿಕರ ಸಮ್ಮುಖದಲ್ಲಿ ನೂತನ ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದು ಎಂ.ಉಮೇಶ ಇವರು ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಶಿಕ್ಷಕಿ ಅಂಬಿಕಾ ಸ್ವಾಗತಿಸಿ, ಶಿಕ್ಷಕಿ ಅನಿಶಾ ಧನ್ಯವಾದ ವಿತ್ತರು, ಶಿಕ್ಷಕಿ ಚೈತ್ರರವರು ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು. ವಿದ್ಯಾರ್ಥಿಗಳಿಗೆ ಸಿಹಿ ಭೋಜನ ನೀಡಲಾಯಿತು.