ಅಳದಂಗಡಿ: ಸೈಂಟ್ ಪೀಟರ್ ಶಾಲೆಯಲ್ಲಿ ಸಿಬ್ಬಂದಿ ವರ್ಗದವರಿಗೆ ಪುನಶ್ಚೇತನ ಕಾರ್ಯಗಾರ

0

ಅಳದಂಗಡಿ: ಸೈಂಟ್ ಪೀಟರ್ ಕ್ಲೇವರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಿಬ್ಬಂದಿಗಳಿಗೆ ಒಂದು ದಿನದ ಪುನಶ್ಚೇತನ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಯಿತು.

ಕೆನರಾ ಕಮ್ಯುನಿಕೇಶನ್ ಸೆಂಟರ್ ಇದರ ಮಾಜಿ ನಿರ್ದೇಶಕ ಮಂಗಳೂರು ಪ್ರಾಂತ್ಯದ ವಂ.ಫಾ.ರಿಚರ್ಡ್ ಡಿ’ಸೋಜ ರವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದರು.

ಈ ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕ ವಂ.ಫಾ.ಎಲಿಯಸ್ ಡಿಸೋಜ ಅವರು ಉಪಸ್ಥಿತರಿದ್ದರು.

ಫಾ.ರಿಚರ್ಡ್ ಡಿಸೋಜ ಅವರನ್ನು ಪರಿಚಯಿಸಿ ಸ್ವಾಗತಿಸಿದರು.

ನಂತರ ಶಿಕ್ಷಕರಿಗೆ ಈ ತರಬೇತಿಯ ಪ್ರಯೋಜನ ಪಡೆಯಲು ಹೇಳಿದರು.

ಸಂಪನ್ಮೂಲ ವ್ಯಕ್ತಿ ವಂ.ಫಾ.ರಿಚಾರ್ಡ್ ಡಿಸೋಜರವರು ಶಿಕ್ಷಕರಿಗೆ ತರಗತಿ ನಿರ್ವಹಣೆ, ಕೌಶಲ್ಯ ಕ್ರಿಯಾಶೀಲತೆ ಮತ್ತು ಬದಲಾವಣೆಗಳಿಗೆ ಒಗ್ಗಿ ಕೊಂಡು ಹೊಸತನವನ್ನು ಮೈಗೂಡಿಸಿಕೊಂಡು ಉತ್ತಮ ಶಿಕ್ಷಕರಾಗಿ ಮುಂದುವರಿಯಬೇಕು ಎಂದು ತಿಳಿಸಿದರು.

ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಸ್ಟೀವನ್ ಪಾಯ್ಸ್, ಶಿಕ್ಷಕರಕ್ಷಕ ಸಂಘದ ಉಪಾಧ್ಯಕ್ಷ ಶಾಮ್ ಸುಂದರ್ ಭಟ್ ಮುಖ್ಯ ಶಿಕ್ಷಕ ನೋರ್ಬರ್ಟ್ ಪೌಲ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸಹ ಶಿಕ್ಷಕಿ ಸಿಸ್ಟರ್ ಫ್ರಾನ್ಸಿಸ್ ಮೇರಿ ಕಾರ್ಯಕ್ರಮವನ್ನು ನಿರೂಪಿಸಿ, ಸಹಶಿಕ್ಷಕ ಅವಿನ್ ವಾಸ್ ಸ್ವಾಗತಿಸಿ, ಸಹ ಶಿಕ್ಷಕಿ ರಾಜೇಶ್ವರಿ ವಂದಿಸಿದರು.

LEAVE A REPLY

Please enter your comment!
Please enter your name here