ಪತ್ರಿಕಾಗೋಷ್ಠಿ: ರೌಡಿ ಶೀಟರ್‌ನ ಬಂಧನ ಹೊರತು ಸ್ವಾತ್ರಂತ್ಯ ಹೋರಾಟಗಾರನಲ್ಲ- ಕಾಗೆ ಎಂದಿದ್ದಕ್ಕೆ ಸ್ವಾಗತಾರ್ಹ- ಬಳ್ಳಾರಿಯ ಗಣಿ ಧಣಿಯ ಶಿಷ್ಯ ಶಾಸಕರು: ರಕ್ಷಿತ್ ಶಿವರಾಂ

0

ಬೆಳ್ತಂಗಡಿ: ಶಶಿರಾಜ್ ಶೆಟ್ಟಿ ರೌಡಿ ಶೀಟರ್. ಆತ ಸ್ವಾತ್ರಂತ್ಯ ಹೋರಾಟಗಾರನಲ್ಲ. ಅನೇಕ ಪ್ರಕರಣಕ್ಕೆ ಬೇಕಾಗಿದ್ದಾರೆ. ಆತನನ್ನು ಬಚಾವ್ ಮಾಡಲು ಶಾಸಕರು ಠಾಣೆಗೆ ಬಂದಿರುವುದು ಇತಿಹಾಸ. ಇವರು ಸಾಮಾನ್ಯ ವ್ಯಕ್ತಿಯನ್ನು ಬಚಾವ್ ಮಾಡಲು ಠಾಣೆಗೆ ಎಷ್ಟು ಬಾರಿ ಬಂದಿದ್ದಾರೆ. ನೀತಿ ಸಂಹಿತೆ ಉಲ್ಲಂಘಿಸಿ ಪ್ರತಿಭಟನೆ ಮಾಡಿದ್ದವರನ್ನು ಬಂಧಿಸಿ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಹೇಳಿದರು.ಅವರು ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮೇ. 21ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಮೇಲಂತಬೆಟ್ಟುವಿನಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿರುವುದು ತಹಶೀಲ್ದಾರ್ ವಶಪಡಿಸಿ, ಪೊಲೀಸರು ತನಿಖೆ ನಡೆಸಿದಾಗ ಅನಧೀಕೃತವಾಗಿ ಸ್ಫೋಟಕ ಶೆಕರಣೆ ಮಾಡಿ ಗಣಿಗಾರಿಕೆ ನಡೆಸುತ್ತಿರುವುದು ಕಂಡು ಬಂದಿದೆ. ಸ್ಫೋಟಕದ ವಿಚಾರದಲ್ಲಿ ರಾಜ್ಯವೇ ಬೆಳ್ತಂಗಡಿ ಕಡೆಗೆ ತಿರುಗಿ ನೋಡುವಂತೆ ಆಗಿದೆ. ಪೊಲೀಸರು ದಾಸ್ತಗಿರಿ ಮಾಡುವ ಸಂದರ್ಭದಲ್ಲಿ ಶಶಿರಾಜ್ ಶೆಟ್ಟಿ ಹಾಗೂ ಪ್ರಮೋದ್ ಕುಮಾರ್ ಡಿಡುಪೆ ಅವರ ಹೆಸರು ಬಂದಿದೆ ಎಂದು ತಿಳಿಸಿದರು.

ಕಾಗೆ ಎಂದಿದ್ದಕ್ಕೆ ಸ್ವಾಗತರ್ಹ: ಕಾಗೆ ಎಂದಿದ್ದಕ್ಕೆ ಸ್ವಾಗತರ್ಹ ಹಿಂದೂ ಧರ್ಮದಲ್ಲಿ ಕಾಗೆ ಪವಿತ್ರ ಸ್ಥಾನವಿದೆ. ನಾವು ಶ್ರಮ ಜೀವಿ. ರಾಮ, ಕೃಷ್ಣ, ಶನಿ ದೇವರ ಬಣ್ಣ ಕಪ್ಪು. ತುಳುನಾಡಿನ ದೈವಗಳ ಕೊರಗಜ್ಜ, ಕಲ್ಲುರ್ಟಿ-ಕಲ್ಕುಡ ದೈವಗಳ ಬಣ್ಣ ಕೂಡ ಕಪ್ಪು. ನೀವು ಬಣ್ಣದ ಬಗ್ಗೆ ಠೀಕಿಸಿರುವುದು ಅಕ್ಷಮ್ಯ ಅಪಾರದ. ಖಾಕಿಗೆ ಮಹತ್ವವಿದೆ. ಅರಣ್ಯ, ಅಬಕಾರಿ ಹಾಗೂ ಆರ್‌ಎಸ್‌ಎಸ್‌ನಲ್ಲಿಯೂ ಖಾಕಿ ಧರಿಸುತ್ತಾರೆ ನೀವು ಖಾಕಿಯನ್ನು ನಿಂದಸಿದಾಗ ಆರ್‌ಎಸ್‌ಎಸ್ ಖಾಕಿಗೂ ನಿಂದನ ಮಾಡಿದ್ದಂತೆ. ಪೊಲೀಸರಿಗೆ ನಿಂಧಿಸರುವುದು ಖಂಡನೀಯ. ವಿಶ್ವದಲ್ಲಿಯೇ ಕರ್ನಾಟಕದ ಪೊಲೀಸ್ ಇಲಾಖೆ ಹೆಸರುವಾಸಿ. ಪೊಲೀಸ್ ಇಲಾಖೆ ವಿರುದ್ಧ ಮಾತನಾಡಿದರೆ ಧ್ವನಿ ಎತ್ತುತ್ತೇವೆ ಎಂದು ಹೇಳಿದರು.

ಬಳ್ಳಾರಿ ಗಣಿಧಣಿಯ ಶಿಷ್ಯ ಶಾಸಕರು: ಕಳೆದ 12 ತಿಂಗಳಿನಲ್ಲಿ 4 ಕೇಸು ಶಾಸಕರ ಮೇಲೆ ದಾಖಲಾಗಿದೆ. ನಿಮಗೆ ನಾಚಿಕೆಯಾಗಬೇಕು. ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟಂತೆ ನಿಮಗೆ ಅಧಿಕಾರ ನೀಡಿದ್ದಾಂತಗಿದೆ. ನಳಿನ್ ಕುಮಾರ್ ಕಟೀಲ್‌ಗೆ ಸೀಟ್ ತಪ್ಪಿಸಿದ್ದು ಹರೀಶ್ ಪೂಂಜ. ದಿವಗಂತ ವಸಂತ ಬಂಗೇರರನ್ನು ಸಾರ್ವಜನಿಕವಾಗಿ ಠೀಕಿಸಿರುವುದು ಖಂಡನೀಯ. ಮುಂದೆ ಬಂಗೇರರ ಮಾತು ಬಂದರೆ ನಿಮ್ಮ ಮನೆಗೆ ಮುತ್ತಿಗೆ ಹಾಕುವ ಕಾರ್ಯ ಕಾರ್ಯಕತರ್ಯರು ಮಾಡುತ್ತಾರೆ. ಹುಲಿಯ ಘರ್ಜನೆಯ ಮುಂದೆ ಇಲಿ ಘರ್ಜಿಸಲು ಸಾಧ್ಯವಿಲ್ಲ.

ಡಿ.ಜೆ ಹಳ್ಳಿ, ಕೆ.ಜೆ. ಹಳ್ಳಿಯ ಪ್ರಕರಣವನ್ನು ಸರ್ಮಥಿಸಿಕೊಂಡಿರಿ. ಬೆಂಕಿ ಹಚ್ಚುತ್ತೇನೆ ಎಂದ ನಳಿನ್ ಪರಿಸ್ಥಿತಿ ಏನಾಯಿತು. ಬಳ್ಳಾರಿಯ ಗಣಿಧಣಿಯ ಶಿಷ್ಯ ಶಾಸಕರು ಎಂದು ಹೇಳಿದರು.ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಕಾಶಿಪಟ್ಟ, ಕಾಂಗ್ರೆಸ್ ಪಕ್ಷದ ಪ್ರಮುಖರಾದ ಜೈಶನ್ ಪಾಠೇರಿ, ವಂದನಾ ಭಂಡಾರಿ, ಸುದರ್ಶನ್ ಶೆಟ್ಟಿ, ಶೇಖರ್ ಕುಕ್ಕೆಡಿ, ಕರೀಮ್ ಗೇರುಕಟ್ಟೆ, ನೇಮಿರಾಜ್ ಕಿಲ್ಲೂರು ಹಾಗೂ ನಮಿತಾ ಉಪಸ್ಥಿತರಿದ್ದರು. ಧರಣೇಂದ್ರ ಕುಮಾರ್ ಸ್ವಾಗತಿಸಿ, ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ನಾಗೇಶ್ ಕುಮಾರ್ ವಂದಿಸಿದರು.

p>

LEAVE A REPLY

Please enter your comment!
Please enter your name here