ಬಂದಾರು: ಬಟ್ಲಡ್ಕ ಜುಮಾ ಮಸೀದಿಯ ಜಮಾಅತ್ ಮಹಾಸಭೆಯು ಮೇ 17ರಂದು ಜುಮಾ ನಮಾಜು ಬಳಿಕ ಬಟ್ಲಡ್ಕ ಜಮಾಅತ್ ಗೌರವಾಧ್ಯಕ್ಷ ಅಬ್ದುಲ್ ರಹಿಮಾನ್ ಸಾದಾತ್ ತಂಙಲ್ ರವರ ನೇತೃತ್ವದಲ್ಲಿ ನಡೆಯಿತು.
ಜಮಾಅತ್ ಖತೀಬ್ ಮುಹಮ್ಮದ್ ಆಸಿಫ್ ಸಖಾಫಿ ಯವರು ಸರ್ವರನ್ನೂ ಸ್ವಾಗತಿಸಿ, ವರದಿ ಹಾಗೂ ಲೆಕ್ಕ ಪತ್ರಗಳನ್ನು ಸಮಿತಿಯ ಜೊತೆ ಕಾರ್ಯದರ್ಶಿ ರಹೀಂ ಬಟ್ಲಡ್ಕ ಮಂಡಿಸಿದರು.
ಪ್ರಸ್ತುತ ಸಮಿತಿಯನ್ನು ವಿಸರ್ಜಿಸಿ ನೂತನ ಸಮಿತಿಯನ್ನು ರಚಿಸಲಾಯಿತು.
ಬಟ್ಲಡ್ಕ ಜಮಾಅತ್ ನ ನೂತನ ಅಧ್ಯಕ್ಷರಾಗಿ ಮಹಮ್ಮದ್ ಬಂದಾರು, ಉಪಾಧ್ಯಕ್ಷರಾಗಿ ಸುಲೈಮಾನ್.ಪಿ, ಪ್ರ.ಕಾರ್ಯದರ್ಶಿಯಾಗಿ ಅಬ್ಬಾಸ್.ಬಿ, ಜೊತೆ ಕಾರ್ಯದರ್ಶಿಯಾಗಿ ಸಿದ್ದೀಕ್.ಪಿ ಮತ್ತು ಹಮೀದ್.ಎಮ್, ಕೋಶಾಧಿಕಾರಿಯಾಗಿ ಇಸುಬು.ಪಿ ಹಾಗು ಸದಸ್ಯರುಗಳಾಗಿ ಅಬೂಬಕ್ಕರ್.ಬಿ, ಆದಂ.ಪಿ, ಅಬ್ದುಲ್ ಖಾದರ್.ಡಿ, ಹಬೀಬ್.ಪಿ, ರಫೀಕ್.ಪಿ, ಸೈಫ್.ಬಿ, ರಹೀಂ.ಬಿ, ಇಸ್ಮಾಯಿಲ್.ಬಿ ನೇಮಕರಾಗಿದ್ದಾರೆ.
p>