ಕೊಕ್ಕಡ: ಕೌಕ್ರಾಡಿ ಸಂತ ಜೋನರ ದೇವಾಲಯದ ನೂತನ ಧರ್ಮಗುರುಗಳಾಗಿ ವಂದನೀಯ ಅನಿಲ್ ಪ್ರಕಾಶ್ ಡಿಸಿಲ್ವಾರವರು ಅಧಿಕಾರ ಸ್ವೀಕಾರ

0

ಕೊಕ್ಕಡ: ಕೌಕ್ರಾಡಿ ಸಂತ ಜೋನರ ದೇವಾಲಯದ ಧರ್ಮಗುರುಗಳಾಗಿದ್ದ ವಂದನೀಯ ಫಾ| ಜಗದೀಶ್ ಲೂಯಿಸ್ ಪಿಂಟೊರವರು 6 ವರ್ಷಗಳ ಸೇವೆಯನ್ನು ಸಲ್ಲಿಸಿ, ಮಂಗಳೂರು ಧರ್ಮಪ್ರಾಂತ್ಯದ ಖಜಾಂಜಿಯಾಗಿ ವರ್ಗಾವಣೆಯಾದರು.

ಈ ಸಂದರ್ಭದಲ್ಲಿ ಕಾಸರಗೋಡು ಕುಂಬ್ಳೆ ದೇವಾಲಯದಿಂದ ವರ್ಗಾವಣೆಗೊಂಡು ಕೊಕ್ಕಡ ದೇವಾಲಯಕ್ಕೆ ನೂತನ ಧರ್ಮಗುರುಗಳಾಗಿ ವಂದನೀಯ ಅನಿಲ್ ಪ್ರಕಾಶ್ ಡಿಸಿಲ್ವಾರವರು ಮೇ 15ರಂದು ಅಧಿಕಾರ ಸ್ವೀಕರಿಸಿದರು.

ಧಾರ್ಮಿಕ ವಿಧಿ-ವಿಧಾನಗಳನ್ನು ಬಿಷಪ್ ಪ್ರತಿನಿಧಿಯಾಗಿ ಪುತ್ತೂರು ವಲಯ ಪ್ರಧಾನ ಗುರು ವಂದನೀಯ ಫಾ.ಲಾರೆನ್ಸ್ ಮಸ್ಕರೇನ್ಹಸ್ ರವರು ನೆರವೇರಿಸಿದರು.

ಧಾರ್ಮಿಕ ವಿಧಿ ವಿಧಾನಗಳನ್ನು ಫಾ.ಅಶೋಕ್ ರವರು ನಿರೂಪಿಸಿದರು.

ಕಾಸರಗೋಡು ವಲಯ ಪ್ರಧಾನ ಗುರುಗಳಾಗಿರುವ ವಂದನೀಯ ಫಾ.ಸ್ಟ್ಯಾನಿ ಪಿರೇರಾ, ಪುತ್ತೂರು ಹಾಗೂ ಕಾಸರಗೋಡು ವಲಯಗಳ ದೇವಾಲಯದ ಧರ್ಮಗುರುಗಳು ಉಪಸ್ಥಿತರಿದ್ದರು.

ಕುಂಬ್ಳೆ ಚರ್ಚ್ ಉಪಾದ್ಯಕ್ಷ ರಾಜ್ ಸ್ಟೀವನ್ ಡಿಸೋಜ ಹಾಗೂ ಕೊಕ್ಕಡ ಮತ್ತು ಕುಂಬ್ಳೆ ದೇವಾಲಯದ ಭಕ್ತಾದಿಗಳು ಹಾಜರಿದ್ದರು.

ಕೊಕ್ಕಡ ಚರ್ಚ್ ಉಪಾಧ್ಯಕ್ಷ ನೋಯೆಲ್ ಪ್ರವೀಣ್ ಮೊಂತೇರೊ ರವರು ಸ್ವಾಗತಿಸಿ, ದೇವಾಲಯದಿಂದ ನಿರ್ಗಮಿಸುವ ವಂದನೀಯ ಫಾ.ಜಗದೀಶ್ ಲೂಯಿಸ್ ಪಿಂಟೋರವರು ವಂದಿಸಿ, ಚರ್ಚ್ ಪಾಲನ ಸಮಿತಿ ಸದಸ್ಯ ವಿನ್ಸೆಂಟ್ ಮಿನೇಜಸ್‌ ಕಾರ್ಯಕ್ರಮ ನಿರೂಪಿಸಿದರು.

p>

LEAVE A REPLY

Please enter your comment!
Please enter your name here