ನೆಲ್ಯಾಡಿ: ನೆಲ್ಯಾಡಿಯ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದಲ್ಲಿ ಮೇ 12ರಂದು ಚರ್ಚಿನ ಹದಿಮೂರು ಮಂದಿ ಮಕ್ಕಳು ಪರಮ ಪ್ರಸಾದ ಸ್ವೀಕರಣೆ ಮಾಡಿದರು.
ಕ್ರೈಸ್ತರ ಏಳು ಸಂಸ್ಕಾರಗಳಲ್ಲಿ ಒಂದಾಗಿರುವ ಈ ಪುಣ್ಯ ಕಾರ್ಯವು ಮಕ್ಕಳು ಒಳಿತು ಮತ್ತು ಕೆಡಕುಗಳ ಬಗ್ಗೆ ತಿಳುವಳಿಕೆಯಾಗುವ ಪ್ರಾಯದಲ್ಲಿ ನೀಡಲಾಗುತ್ತದೆ.
ಬಹು ದಿನಗಳ ತರಬೇತಿಯ ನಂತರ ನೀಡಲಾಗುವ ಈ ಸಂಸ್ಕಾರವು ಮಕ್ಕಳ ಬದುಕಿನಲ್ಲಿ ತುಂಬಾ ಪ್ರಭಾವ ಬೀರುವ ಅಂಶವಾಗಿದೆ.
ಈ ಸಂದರ್ಭದಲ್ಲಿ ಧರ್ಮ ಗುರುಗಳಾದ ವಂದನಿಯ ಫಾ.ಶಾಜಿ ಮಾತ್ಯು ಜೊತೆಯಲ್ಲಿ ಫಾ.ಸೆಲಿನ್, ಫಾ.ಅರುಣ್, ಫಾ.ಪ್ರಸಾದ್ ಬೆಳ್ತಂಗಡಿ ಧರ್ಮ ಪ್ರಾಂತ್ಯದ ವಂದನಿಯ ಚಾನ್ಸೇಲರ್ ಫಾ.ಲಾರೆನ್ಸ್ ಪೂಣೋಲಿಲ್ ಪ್ರದಾನ ಗುರುಗಳಾಗಿ ವಿಧಿಗಳನ್ನು ನೆರವೇರಿಸಿದರು.
ವಂದನಿಯ ಸಿಸ್ಟೆರ್ ಬ್ಲೆಸಿ ಮರಿಯಾ ತರಬೇತಿ ನೀಡಿದರು.ಪೋಷಕ ಪ್ರಕಾಶ್ ಕಲ್ಲೂಪುರ ಪರಂಬಿಲ್ ವಂದನಾರ್ಪಣೆಗೈದರು.
p>