ಮಚ್ಚಿನ: ಮಚ್ಚಿನ ಗ್ರಾಮದ ಪೆರ್ನಡ್ಕ ನಿವಾಸಿ ವಿವಾಹಿತ ಜನಾರ್ದನ (40 ವರ್ಷ) ವಿಷ ಸೇವಿಸಿ ಆತ್ಮಹತ್ಯೆ ಯತ್ನಿಸಿದ ಘಟನೆ ನಿನ್ನೆ ರಾತ್ರಿ ಮೇ.02ರಂದು ನಡೆದಿದೆ.
ರಾತ್ರಿ ಎಲ್ಲರೂ ಮಲಗಿದ್ದ ಸಮಯದಲ್ಲಿ ಕೀಟನಾಶಕ ವಿಷ ಸೇವಿಸಿ ಚಿಂತ ಜನಕ ಸ್ಥಿತಿಯಲ್ಲಿದ್ದದ್ದನ್ನು ಕಂಡು ಪತ್ನಿ ತಕ್ಷಣ ಸ್ಥಳೀಯ ಮನೆಯವರನ್ನು ಕರೆದು ವಿಷಯ ತಿಳಿಸಿ ಚಿಕಿತ್ಸೆಗಾಗಿ ಬೆಳ್ತಂಗಡಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬರಬೇಕಾಗಿದೆ.
p>