ಚಾರ್ಮಾಡಿ : ದ.ಕ ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಬೆಳ್ತಂಗಡಿ ತಾಲೂಕು ಸ್ವೀಪ್ ಸಮಿತಿಯ ಹಲವು ಸುತ್ತಿನ ಸಂವಾದ, ಆತ್ಮೀಯತೆಯ ಮಾತುಕತೆಗೆ ಮಾತು ಕೊಟ್ಟ ಬಾಂಜಾರು ಮಲೆಯ ಮತದಾರರು.
ಕೊಟ್ಟ ಮಾತಿನಂತೆ 2024 ರ ಲೋಕಸಭಾ ಚುನಾವಣೆಯಲ್ಲಿ ಶೇ.100 ರಷ್ಟು ಮತದಾನ ಮಾಡಿಸುವುದಕ್ಕಾಗಿ ಪಣ ತೊಟ್ಟಿರುವ ಬಾಂಜಾರು ಮಲೆಯ ಮತದಾರರು.
ಸಮುದಾಯದ ಭವನವನ್ನು ಯಾವ ಮದುವೆ ಮನೆಗೂ ಕಡಿಮೆ ಇಲ್ಲದಂತೆ ಸಿಂಗರಿಸಿ ತಳಿರು ತೋರಣಗಳಿಂದ ಅಲಂಕರಿಸಿ ಮತಗಟ್ಟೆಯನ್ನು ಸಾಂಪ್ರದಾಯಿಕವಾಗಿ, ನೈಸರ್ಗಿಕವಾಗಿ, ಮನೋಜ್ಞವಾಗಿ ಕಂಗೊಳಿಸುವಂತೆ ಸಜ್ಜುಗೊಳಿಸುತ್ತಿದ್ದಾರೆ.
p>