ಮುಂಡಾಜೆ: ರಸ್ತೆ ಬದಿಗೆ ಜಾರಿದ ಟೆಂಪೋ- ಟ್ರಾಫಿಕ್ ಜಾಮ್

0

ಮುಂಡಾಜೆ: ಅಂಬಡ್ತ್ಯಾರು ಸಮೀಪ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಈ ಪ್ರದೇಶದಲ್ಲಿ ತಂದು ಸುರಿದಿರುವ ಜಲ್ಲಿ ರಾಶಿಯನ್ನು ತಪ್ಪಿಸುವ ಭರದಲ್ಲಿ ರಾಂಗ್ ಸೈಡ್ ನಿಂದ ಚಲಿಸಿದ ಟೆಂಪೋ ರಸ್ತೆ ಬದಿಗೆ ಜಾರಿದ ಘಟನೆ ಸೋಮವಾರ ಎ.15ರಂದು ಸಂಜೆ ನಡೆಯಿತು.

ಇದರಿಂದ ಅನೇಕ ಹೊತ್ತು ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಯಿತು.

ಹೆದ್ದಾರಿ ಕಾಮಗಾರಿ ವೇಳೆ ವಾಹನ ಸವಾರರಿಗೆ ಯಾವುದೇ ರೀತಿಯ ಮುನ್ನೆಚ್ಚರಿಕೆ ನೀಡುವ ವ್ಯವಸ್ಥೆ ಕೈಗೊಳ್ಳದೆ, ಬೇಕಾಬಿಟ್ಟಿ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರ ವಿರುದ್ಧ ವಾಹನ ಸವಾರರು ಹಾಗೂ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

p>

LEAVE A REPLY

Please enter your comment!
Please enter your name here