ಉಜಿರೆ: ನಾವು ಕಲಿಯುವಂತ ವಿಷಯವನ್ನು ಪ್ರಾಯೋಗಿಕವಾಗಿ ಆಳವಡಿಸಿದಾಗ ನಮ್ಮ ಜ್ಞಾನ ವೃದ್ಧಿಯಾಗುತ್ತಿದೆ. ಇದನ್ನು ನಮ್ಮಿಂದ ಕಸಿದುಕೊಳ್ಳಲು ಯಾರಿಂದಲೂ ಅಸಾಧ್ಯ ಇದರಿಂದ ನಾವು ಜೀವನದಲ್ಲಿ ಉತ್ತುಂಗಕ್ಕೆ ಏರಲು ಸಾಧ್ಯವಾಗುತ್ತದೆ ಎಂದು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ಪುತ್ತೂರಿನ ಇಸಿ ವಿಭಾಗದ ಸಹಾಯಕ ಪ್ರಾಧ್ಯಪಕ ಡಾ.ಮಹಾಂತೇಶ್ ಚೌಧರಿ ಹೇಳಿದರು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಾಲಿಟೆಕ್ನಿಕ್ ನ ಇ ಸಿ ವಿಭಾಗದಿಂದ ಕಾಲೇಜಿನಲ್ಲಿ ಹಮ್ಮಿಕೊಂಡ ಸರ್ಕ್ಯುಟ್ ಎಕ್ಸ್ ಪೋ 2024 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಸಂತೋಷ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಎಸ್.ಡಿ.ಎಮ್. ಪಾಲಿಟೆಕ್ನಿಕ್ ಹಳೆಯ ವಿದ್ಯಾರ್ಥಿ ಅಶ್ವಿನ್ ನಾಯ್ಕ ಅಸಿಸ್ಟೆಂಟ್ ಮ್ಯಾನೇಜರ್ ಲೆಕ್ಸಾ ಲೈಟಿಂಗ್ ಟೆಕ್ನಲೋಜಿಸ್ ಪ್ರೆರ್ವೈಟ್ ಲಿಮಿಟೆಡ್ ಮೂಡಬಿದ್ರೆ ಇವರು ತಮ್ಮ ಅನುಭವವನ್ನು ವಿದ್ಯಾರ್ಥಿಗಳ ಜೊತೆ ಹಂಚಿಕೊಂಡರು. ಕಾಲೇಜು ವ್ಯವಸ್ಥಾಪಕ ಚಂದ್ರನಾಥ ಜೈನ್, ವಿಭಾಗ ಮುಖ್ಯಸ್ಥೆ ಮೇರಿ ಸ್ಮಿತಾ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳೀಗೆ ರೋಬೋ ರೇಸ್ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಸ್ನೇಹಾ ಇ.ಆರ್ ಸ್ವಾಗತಿಸಿದರು.ಜೀವನ್ ಕೆ.ವಿ ನಿರೂಪಿಸಿ, ಅನನ್ಯಾ ವಂದಿಸಿದರು